ಕಾಬೂಲ್, ಆಗಸ್ಟ್ 01: ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಮಿಲಿಟರಿ ಚೆಕ್ ಪಾಯಿಂಟ್ ಬಳಿ ಆತ್ಮಾಹುತಿ ಕಾರು ಬಾಂಬ್ ದಾಳಿ ನಡೆದು 9 ಮಂದಿ ಮತಪಟ್ಟಿದ್ದಾರೆ.
ತಡರಾತ್ರಿ ಈ ದುರ್ಘಟನೆ ನಹ್ರಿ ಸಾರಾ ಜಿಲ್ಲೆಯಲ್ಲಿ ನಡೆದಿದ್ದು ಭದ್ರತಾ ಪಡೆಯ ಮೂವರು ಸಿಬ್ಬಂದಿ ಹಾಗೂ ಮಗು ಗಾಯಗೊಂಡಿದ್ದಾರೆ ಎಂದು ಹೆಲ್ಮಂಡ್ ಪ್ರಾಂತ್ಯದ ಗವರ್ನರ್ ಅವರ ವಕ್ತಾರ ಒಮರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದರ ಜೊತೆ ಚೆಕ್ ಪಾಯಿಂಟ್ ಬಳಿ ವಾಹನ ಸಾಗುತ್ತಿದ್ದಾಗ ದಾಳಿ ನಡೆದಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಕೂಡ ಸೇರಿದ್ದಾರೆ ಎಂದು ಹೇಳಿದ್ದಾರೆ.
ಪ್ರಸ್ತುತ ಈ ದಾಳಿಯ ಹೊಣೆಯನ್ನು ಯಾರೂ ಕೂಡ ಹೊತ್ತುಕೊಂಡಿಲ್ಲ. ಆದರೆ ದಾಳಿ ನಡೆದ ಪ್ರದೇಶದಲ್ಲಿ ಬಹುತೇಕ ಭಾಗ ತಾಲಿಬಾನ್ ಉಗ್ರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ