ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟೇ ಕಲಿತರು ಕೂಡ ಉದ್ಯೋಗ ಸಿಗುವುದು ತುಂಬಾ ಕಷ್ಟ. ಸಿಕ್ಕರು ಕೂಡ ಅಲ್ಪಸ್ವಲ್ಪ ಸಂಬಳದಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದರೆ ಮಂಗಳೂರಿನಲ್ಲಿ ಒಬ್ಬ ಯುವಕ ತೆಂಗಿನ ತೆಂಗಿನ ಮರವನ್ನು ಏರಿ ತಿಂಗಳಿಗೆ 60 ಸಾವಿರಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ ಎಂಬುದನ್ನು ನೀವು ನಂಬಲೇಬೇಕು.
ಹೌದು ನಾವು ಹೇಳುತ್ತಿರುವುದು ಸತ್ಯ ಸುರತ್ಕಲ್ ನಿವಾಸಿ ಅನುಷ್ ಎಂಬ ಪಿಯುಸಿ ಓದಿರುವ ಯುವಕನ ಜೀವನವನ್ನು ಕೃಷಿ ವಿಜ್ಞಾನ ಕೇಂದ್ರ ಬದಲಾಯಿಸಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಕೃಷಿ ವಿಜ್ಞಾನ ಕೇಂದ್ರವು ವೈಜ್ಞಾನಿಕವಾಗಿ ತೆಂಗಿನ ಮರವನ್ನು ಎರುವ ತರಬೇತಿಯನ್ನು ಏರ್ಪಡಿಸುವುದರ ಬಗ್ಗೆ ಜಾಹೀರಾತನ್ನು ನೀಡಿತ್ತು. ಈ ಜಾಹೀರಾತನ್ನು ನೋಡಿದ ಅನುಷ ತರಬೇತಿಗೆ ಸೇರಿದ್ದಾನೆ.
ತರಬೇತಿ ಮುಗಿದ ನಂತರ ತನ್ನ ಕೆಲಸವನ್ನು ಆರಂಭಿಸಿದ ಅನುಷ್ ಪ್ರತಿ ಮರವನ್ನು ಹತ್ತಲು 30ರಿಂದ 45 ರೂಪಾಯಿ ತನಕ ತೆಗೆದುಕೊಳ್ಳುತ್ತಾನೆ. ಹೀಗೆ ದಿನವೊಂದಕ್ಕೆ 80ರಿಂದ 90 ಮರಗಳನ್ನು ಇರುವ ಅನುಷ್ ಪ್ರತಿದಿನಕ್ಕೆ 2000ದಿಂದ ಮೂರು ಸಾವಿರ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ಈ ಮೂಲಕ ಅನುಷ್ ಇತರ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.