ಶಿರಶಿ: ಸಾಮಾಜಿಕ ಜಾಲತಾಣಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸಂದೇಶಗಳನ್ನು ರವಾನೆ ಮಾಡುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯೊಬ್ಬನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸರ್ಪನಕಟ್ಟಾ ನಿವಾಸಿ ವೆಂಕಟೇಶ ಮಂಜುನಾಥ ನಾಯಕ ಎಂದು ಹೇಳಲಾಗಿದೆ.
ಈತ ವಾಟ್ಸಪ್ ಮತ್ತು ಫೇಸ್ಬುಕ್ ಗಳಲ್ಲಿ ಕೋಮು ಭಾವನೆ ಗಳಿಗೆ ಧಕ್ಕೆ ತರುವಂತಹ ಮತ್ತು ಸಮಾಜದಲ್ಲಿ ಧರ್ಮಗಳ ಮಧ್ಯೆ ಶಾಂತಿ ಕದಡುವಂತೆ ಪೋಸ್ಟ್ಗಳನ್ನು ಮಾಡುತ್ತಿದ್ದು ಈತನ ಮೇಲೆ ಶಿರಸಿ ಮಾರುಕಟ್ಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶ್ರೀಯುತ CPI ಪ್ರದೀಪ ಬಿ.ಯು ಅವರ ನೇತ್ರತ್ವದಲ್ಲಿ PSI ನಾಗಪ್ಪ ಹಾಗೂ ಸಿಬ್ಬಂದಿಗಳಾದ ಚಿದಾನಂದ ನಾಯ್ಕ, ವೆಂಕಟೇಶ ನಾಯ್ಕ, ದೇವರಾಜ,ಪ್ರದೀಪ ಕೈಟಕರ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿ ಇನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
