ಹಲವು ಅವಕಾಶಗಳು ಗೋಚರವಾಗುತ್ತವೆ. ಆಲೋಚಿಸಿ, ನಿರ್ಧಾರ ಕೈಗೊಳ್ಳಿ. ಭವಿಷ್ಯದ ಬಗ್ಗೆ ಇದ್ದ ಅತಿ ದೊಡ್ಡ ಆತಂಕದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಮನೆಯಲ್ಲಿ ಸಣ್ಣ- ಪುಟ್ಟ ಸಂತೋಷ ಕೂಟಗಳು ನಡೆಯುವ ಯೋಗ ಇದೆ. ಎಲ್ಲ ಒತ್ತಡದ ಮಧ್ಯೆಯೂ ಸಮಾಧಾನ ಇರುತ್ತದೆ.
ಸಂಗಾತಿ, ಮಕ್ಕಳ ಸಲುವಾಗಿ ನಿಮ್ಮ ಆಸೆ- ಆಕಾಂಕ್ಷೆಗಳನ್ನು ಬಿಟ್ಟುಕೊಡಲಿದ್ದೀರಿ. ಹೆಚ್ಚುವರಿ ಆದಾಯ ಮೂಲದಿಂದ ಸಮಾಧಾನಕರವಾದ ಹಣಕಾಸಿನ ಹರಿವಿದೆ. ಹಳೆಯ ದ್ವೇಷ ಸಾಧನೆ ಮಾಡುವುದಕ್ಕೆ ಹೋಗಬೇಡಿ. ತಾತ್ಕಾಲಿಕ ಸವಾಲುಗಳಿಂದ ಧೃತಿಗೆಡುವ ಅಗತ್ಯ ಇಲ್ಲ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಿಗುವಿನ ಸ್ಥಿತಿ ಇರುತ್ತದೆ.
ನಿಮ್ಮ ಸಲಹೆಯನ್ನು ಕೇಳಬೇಕಿತ್ತು ಎಂದು ಕೆಲವು ಗೆಳೆಯರು ಅಲವತ್ತುಕೊಳ್ಳುತ್ತಾರೆ. ನಿಮ್ಮ ದೂರದೃಷ್ಟಿ ಹಾಗೂ ಲೆಕ್ಕಾಚಾರದ ನಡೆಗಳಿಗೆ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಸಾಲದ ಬಾಕಿ ಬರಬೇಕಿದ್ದಲ್ಲಿ ಈ ದಿನ ಅದಕ್ಕಾಗಿ ಪ್ರಯತ್ನ ಮಾಡಬಹುದು. ದೂರ ಪ್ರಯಾಣ ಮಾಡುವ ಯೋಗ ಇದೆ.
ಈ ದಿನ ದೇಹಾಯಾಸ ಕಾಡಲಿದೆ. ಗುರು- ಹಿರಿಯರ ಆಶೀರ್ವಾದದಿಂದ ಹಲವು ಸವಾಲುಗಳನ್ನು ದಾಟಲು ಯಶಸ್ವಿ ಆಗುತ್ತೀರಿ. ನೀವಾಗಿಯೇ ಒಪ್ಪಿಕೊಂಡಿದ್ದ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸುವುದು ಕಷ್ಟವಾಗಲಿದೆ. ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿ ಆಗಬಹುದು.
ಖರ್ಚಿನ ವಿಚಾರ ಬಂದಾಗ ಆತುರ ಮಾಡಬೇಡಿ. ಅಗತ್ಯ ಯಾವುದು ಹಾಗೂ ಈಗ ಅಗತ್ಯ ಇದೆಯಾ ಎಂಬುದನ್ನು ಪರಾಂಬರಿಸಿದ ನಂತರವೇ ತೀರ್ಮಾನ ಕೈಗೊಳ್ಳಿ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿ. ಮಸಾಲೆ ಪದಾರ್ಥಗಳು ಹಾಗೂ ಕರಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.
ನಾಲ್ಕೈದು ಯೋಜನೆಗಳನ್ನು ಒಟ್ಟಿಗೆ ಕೈಗೆತ್ತಿಕೊಳ್ಳುವುದಕ್ಕಿಂತ ಹಂತಹಂತವಾಗಿ ಮುಂದಕ್ಕೆ ಹೆಜ್ಜೆ ಇಡಿ. ನಿಮ್ಮ ಬುದ್ಧಿವಂತಿಕೆ ಮೂಲಕ ಲಾಭ ಮಾಡಿಕೊಳ್ಳುವ ಸಮಯ ಇದು. ದೈವಾನುಗ್ರಹ ನಿಮ್ಮ ಮೇಲಿದೆ. ಮಾನಸಿಕ ನೆಮ್ಮದಿ ಕಳೆದುಕೊಳ್ಳುವಂಥ ಕೆಲಸಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ.
ಅದೆಷ್ಟೇ ಸಣ್ಣ ಕೆಲಸವಾದರೂ ಅದರಿಂದ ಎಷ್ಟೇ ಕಡಿಮೆ ಆದಾಯ ಬರುವಂತೆ ಇದ್ದರೂ ಶ್ರದ್ಧೆ- ಏಕಾಗ್ರತೆಯಿಂದ ಪೂರ್ಣಗೊಳಿಸಿ. ಈ ದಿನ ಹಲವು ಬಗೆಯಲ್ಲಿ ನಿಮಗೆ ಪರೀಕ್ಷೆಯ ದಿನವಾಗಿರುತ್ತದೆ. ತಂದೆ- ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಮನರಂಜನೆ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ.
ಯಾರನ್ನು ಅತ್ಯಂತ ವಿಶ್ವಾಸದಿಂದ ಕಾಣುತ್ತಿದ್ದರೋ ಅವರ ಬಗ್ಗೆ ಅನಾದರವೊಂದು ಬೆಳೆಯುವ ಸಾಧ್ಯತೆ ಇದೆ. ಈ ಹಿಂದೆ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾ ಏನೇನೋ ಯೊಚಿಸಿ, ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟೂ ಈ ದಿನ ಮೌನವಾಗಿ ಇರುವುದು ಉತ್ತಮ.
ಉಳಿತಾಯದ ಹಣವನ್ನು ಬಳಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಸಹಾಯ ಮಾಡ್ತೀನಿ ಎಂದು ಮಾತು ನೀಡಿದ್ದವರು ಈಗ ಸಾಧ್ಯವಿಲ್ಲ ಎಂಬ ಉತ್ತರ ನೀಡಬಹುದು. ಟ್ರಾನ್ಸ್ ಪೋರ್ಟ್ ವ್ಯವಹಾರ ಮಾಡುತ್ತಿರುವವರಿಗೆ ಸಾಲದ ಒತ್ತಡ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ.
ಪ್ರೇಮಿಗಳಿಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ. ಉದ್ಯೋಗ ವಿಚಾರವಾಗಿ ಗಟ್ಟಿಯಾದ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೀರಿ. ಸ್ವತಂತ್ರವಾದ ಆಲೋಚನೆ ಹಾಗೂ ಹೊಸ ಬಗೆಯ ಐಡಿಯಾಗಳ ಮೂಲಕ ಮೇಲಧಿಕಾರಿಗಳ ಗಮನವನ್ನು ಸೆಳೆಯಲಿದ್ದೀರಿ.
ಧಾರ್ಮಿಕ ಕೆಲಸ- ಕಾರ್ಯಗಳಿಗಾಗಿ ನೇತೃತ್ವ ವಹಿಸಿಕೊಂಡು, ಹಣ ಖರ್ಚು ಮಾಡುವ ಯೋಗ ಇದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಆಹಾರ- ನೀರು ಸೇವನೆಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಅಧಿಕಾರಿಗಳು ನೆರವು ನೀಡುವ ಸಾಧ್ಯತೆ ಇದೆ.
ನಿಮ್ಮ ಮಾತಿನ ಮೂಲಕ ಆಕರ್ಷಣೆಯ ಕೇಂದ್ರಬಿದು ಆಗಲಿದ್ದೀರಿ. ಈ ಹಿಂದೆ ನೀವು ಹಾಕಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಹೊಸಬರ ಜತೆಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ಶ್ರಮಪಟ್ಟು ಗಳಿಸಿದ್ದ ಹಣವನ್ನು ಕಳೆದುಕೊಳ್ಳಬೇಕಾದೀತು.
Tags:
ದಿನ ಭವಿಷ್ಯ














