ಇಂದಿನ ಭವಿಷ್ಯ ಏಪ್ರಿಲ್ 28, 2020

Today astrology in kannada today horoscope in kannada
ನಿಮ್ಮ ಅನುಕಂಪಕ್ಕೆ, ಸಹಾನುಭೂತಿಗೆ ಅರ್ಹರು ಯಾರು ಎಂಬ ಬಗ್ಗೆ ಆಲೋಚನೆ ಮಾಡಿ, ಆ ನಂತರ ಮುಂದಕ್ಕೆ ಹೆಜ್ಜೆ ಇಡಿ. ಭಾವನಾತ್ಮಕ ಕ್ಷಣದಲ್ಲಿ ಆಡಿದ ಮಾತಿಗೆ ಕೈಯಿಂದ ಹಣ ಕಳೆದುಕೊಳ್ಳುವಂತೆ ಆಗಬಹುದು. ರಿಯಲ್ ಎಸ್ಟೇಟ್ ವ್ಯವಹಾರಗಳು ಕೈ ಕಚ್ಚುವುದರಿಂದ ಹಣದ ಹರಿವಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗುತ್ತದೆ.
Today astrology in kannada today horoscope in kannada
ನಿಮ್ಮಿಂದ ನಿಗದಿತ ಅವಧಿಯಲ್ಲಿ ಪೂರ್ಣ ಮಾಡಲು ಸಾಧ್ಯವಾಗುವಂಥ ಕೆಲಸ ಮಾತ್ರ ಒಪ್ಪಿಕೊಳ್ಳಿ. ಹಣದ ಅಗತ್ಯ ಇದೆ ಎಂಬ ಕಾರಣಕ್ಕೆ ಒಪ್ಪಿಕೊಂಡ ಕೆಲಸವನ್ನು ಪೂರ್ತಿ ಮಾಡಲಿಕ್ಕೆ ಸಾಧ್ಯವಾಗದೆ ನಿಮ್ಮ ಬಗ್ಗೆ ಇರುವ ಗೌರವವನ್ನು ಕಳೆದುಕೊಳ್ಳಬೇಡ. ನಿಶ್ಚಿತ ಆದಾಯಕ್ಕೆ ದಾರಿ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.

Today astrology in kannada today horoscope in kannada
ಎಂಥ ಅನಿವಾರ್ಯ ಸಂದರ್ಭದಲ್ಲೂ ಅಪಾಯಕಾರಿಯಾದ ಸುಳ್ಳು ಹೇಳಬೇಡಿ. ಒಟ್ಟಾರೆ ಸುಳ್ಳನ್ನೇ ಹೇಳಬೇಡಿ. ಆಡಿದ ಒಂದು ಮಾತಿನಿಂದ ನಿಮ್ಮ ವೃತ್ತಿ ಜೀವನಕ್ಕೆ ಕಳಂಕ ಬರಬಹುದು. ಆ ಕಾರಣಕ್ಕೆ ಪಾರದರ್ಶಕವಾಗಿರಿ. ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಪೂರ್ತಿ ಮಾಡಲು ಪ್ರಯತ್ನಿಸಿ.

Today astrology in kannada today horoscope in kannada
ನಿಮ್ಮಿಂದ ಸಾಧ್ಯವಾದಲ್ಲಿ ಈ ದಿನ ಕನಿಷ್ಠ ಒಬ್ಬ ಅಶಕ್ತರಿಗೆ ಊಟದ ವ್ಯವಸ್ಥೆ ಮಾಡಿ. ನಿರೀಕ್ಷಿತ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಪ್ರೋತ್ಸಾಹ- ಬೆಂಬಲ ಇಲ್ಲವೆಂದು ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಈ ಸಮಯವು ಕಳೆಯಲಿದೆ. ಉತ್ತಮವಾದ ಕಾಲ ಬಂದಾಗ ನಿಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಲಿದ್ದಾರೆ.

Today astrology in kannada today horoscope in kannada
ಕೆಲಸ- ಕಾರ್ಯ, ವ್ಯಾಪಾರ- ವ್ಯವಹಾರ, ಜವಾಬ್ದಾರಿಗಳ ಎಲ್ಲ ಒತ್ತಡದಿಂದ ಸ್ವಲ್ಪವಾದರೂ ಬಿಡುವು ಪಡೆದು ಕುಟುಂಬದವರ ಕಡೆಗೆ ಗಮನ ನೀಡಿ. ಎಲ್ಲರಿಗೂ ಒಪ್ಪುವಂಥ ಪರಿಹಾರವನ್ನು ಸೂಚಿಸುವುದು ಅಸಾಧ್ಯದ ಮಾತು. ಆದ್ದರಿಂದ ನೇರವಂತಿಕೆಯನ್ನು ಬಿಡದೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Today astrology in kannada today horoscope in kannada
ಈಗಾಗಲೇ ಅರ್ಧಕ್ಕೆ ನಿಂತಿರುವ ಯೋಜಗೆ ಮಾಡಿರುವ ಖರ್ಚಿಗೆ ಇನ್ನಷ್ಟು ಸೇರ್ಪಡೆ ಆಗಲಿದೆ. ನಿಮ್ಮ ಖಡಕ್ ಮಾತುಗಳಿಂದ ನಿಗದಿತ ಅವಧಿಯೊಳಗೆ ಕೆಲಸ ಮಾಡಿಸಲು ಸಾಧ್ಯವಾಗಲಿದೆ. ವಹಿಸಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೀರಿ ಎಂಬ ನಿಮ್ಮ ಹೆಸರಿಗೆ ಇನ್ನಷ್ಟು ಗೌರವ ಸೇರಿಕೊಳ್ಳಲಿದೆ.

Today astrology in kannada today horoscope in kannada
ಇತರರ ವೈಯಕ್ತಿಕ ಸಂಗತಿಗಳಲ್ಲಿ ಮೂಗು ತೂರಿಸಬೇಡಿ. ನಿಮಗೆ ಏನೋ ಲಾಭ ಇದೆ ಎಂದುಕೊಳ್ಳುತ್ತಾರೆ. ಜತೆಗೆ ಮನಸ್ಸಿಗೆ ನೋವಾಗುವಂಥ ಮಾತುಗಳನ್ನು ಕೇಳಬೇಕಾಗುತ್ತದೆ. ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬೇಕಾಗುವುದರಿಂದ ದೈಹಿಕ ಆಯಾಸ ಆಗಲಿದೆ. ಆದರೆ ಅದಕ್ಕೆ ಉತ್ತಮ ಪ್ರತಿಫಲ ದೊರೆಯಲಿದೆ.

Today astrology in kannada today horoscope in kannada
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಪರಿಹಾರ ಮಾರ್ಗಗಳು ಗೋಚರವಾಗುತ್ತವೆ. ಸೋದರ- ಸೋದರಿ, ತಂದೆ- ತಾಯಿ ಹೀಗೆ ಕುಟುಂಬದ ಎಲ್ಲ ಸದಸ್ಯರಿಂದಲೂ ಒಂದೊಂದು ಬಗೆಯ ಬೇಡಿಕೆ ಬರುತ್ತದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುವಂತಿದ್ದರೆ ಬಹಳ ಎಚ್ಚರಿಕೆಯಿಂದ ಇರಿ.

Today astrology in kannada today horoscope in kannada
ಇತರರಿಗೆ ನಿಮ್ಮ ಮೇಲೆ ಅನುಮಾನ ಮೂಡಲು ನೀವೇ ಕಾರಣರಾಗದಿರಿ. ಹಳೇ ಪ್ರೀತಿ- ಪ್ರೇಮ ಪ್ರಕರಣಗಳು ಗೋಜಲಾಗುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗಬಹುದು. ಅದಕ್ಕೆ ಅವಕಾಶ ನೀಡಬೇಡಿ. ಮಕ್ಕಳ ಪ್ರಗತಿ ಬಗ್ಗೆ ಹೆಚ್ಚಿನ ಗಮನ ನೀಡಿ. ಉತ್ಸಾಹವನ್ನು ಕಳೆದುಕೊಳ್ಳಬೇಡಿ.

Today astrology in kannada today horoscope in kannada
ಉದ್ಯೋಗದಲ್ಲಿ ಆಗುತ್ತಿರುವ ಮಹತ್ತರವಾದ ಬದಲಾವಣೆ ಕಡೆಗೆ ಗಮನ ನೀಡಿ. ನಿರ್ಲಕ್ಷ್ಯ ಮಾಡಿದರೆ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆಲಸ್ಯ ಮಾಡದೆ, ಹೊಸ ವಿಚಾರಗಳನ್ನು ಕಲಿತುಕೊಳ್ಳಿ. ಆದಾಯದ ಮೂಲಗಳನ್ನು ಹೆಚ್ಚು ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಿಡಬೇಡಿ.

Today astrology in kannada today horoscope in kannada
ಬೇರೆಯವರ ಸಲುವಾಗಿಯಾದರೂ ಸ್ವಾಭಿಮಾನವನ್ನು ಬಿಟ್ಟು, ಸಹಾಯವನ್ನು ಕೇಳುವಂತಾಗುತ್ತದೆ. ಆದರೆ ಇದಕ್ಕೆ ಬೇಸರಿಸಿಕೊಳ್ಳುವ ಅಗತ್ಯ ಇಲ್ಲ. ನಾಲ್ಕು ಜನರಿಗೆ ನೆರವು ಆಗುತ್ತದೆ ಎಂದಾಗ 'ನಾನು- ನನ್ನದು' ಎಂಬುದನ್ನು ಬಿಟ್ಟರೆ ತಪ್ಪಿಲ್ಲ. ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

Today astrology in kannada today horoscope in kannada
ನಿಮ್ಮ ನಿಷ್ಠೆ, ನಿಯತ್ತು, ಪ್ರಾಮಾಣಿಕತೆಗೆ ಸೂಕ್ತ ಸ್ಥಾನ ಮಾನ ದೊರೆಯಲಿದೆ. ನಿಮ್ಮ ಅಂತರಂಗದ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಆದಾಯದ ಮೂಲದಲ್ಲಿ ಹೆಚ್ಚಳ ಮಾಡಿಕೊಳ್ಳುವ ಅವಕಾಶ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ದೀರ್ಘಾವಧಿ ಯೋಜನೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಕ್ತ ಕಾಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement