ಇಂದಿನ ಭವಿಷ್ಯ ಏಪ್ರಿಲ್ 27, 2020

Today astrology in kannada today horoscope in kannada
ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ, ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರಿಗೆ, ಡಯಾಗ್ನೋಸ್ಟಿಕ್ ಸೆಂಟರ್ ನಡೆಸುವವರಿಗೆ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ದಾರಿ ಗೋಚರಿಸುತ್ತದೆ. ಏಕಾಏಕಿ ಆಪ್ತರೆಲ್ಲ ದೂರವಾಗುತ್ತಾರೆ. ಆಪತ್ ಕಾಲಕ್ಕೆ ಎಂದು ಮಾಡಿದ್ದ ಉಳಿತಾಯವನ್ನು ಖರ್ಚು ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ.
Today astrology in kannada today horoscope in kannada
ಯಾರೋ ಭರವಸೆ ನೀಡಿದರು ಎಂಬ ಕಾರಣಕ್ಕೆ ಇರುವ ಉದ್ಯೋಗವನ್ನು ಬಿಡಬೇಡಿ. ಸಣ್ಣ ಪುಟ್ಟ ಅಸಮಾಧಾನಗಳು ಇದ್ದಲ್ಲಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗಿ. ತಂದೆಯ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಿ. ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರಗಳಿಂದ ದೂರ ಇರಿ.

Today astrology in kannada today horoscope in kannada
ಈ ದಿನ ವಿಪರೀತ ಮರೆವು ನಿಮ್ಮನ್ನು ಕಾಡುತ್ತದೆ. ಮುಖ್ಯ ಕೆಲಸಗಳಿದ್ದಲ್ಲಿ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ. ನಿಮ್ಮ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಬರಲಿದೆ. ಸ್ವತಂತ್ರ ಆಲೋಚನೆಗೆ ಸೂಕ್ತ ವೇದಿಕೆ ದೊರೆಯಲಿದೆ. ಹಿರಿಯರ ಸಲಹೆಗಳನ್ನು ಪಾಲಿಸಿ. ಈಶ್ವರನ ಸ್ಮರಣೆ ಮಾಡಿದರೆ ಮಾನಸಿಕ ನೆಮ್ಮದಿ ದೊರೆಯುತ್ತದೆ.

Today astrology in kannada today horoscope in kannada
ಎಂದೋ ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುವಂತೆ ಆಗುತ್ತದೆ. ಇನ್ನೇನು ಕೆಲಸ ಆಗಿಯೇ ಹೋಯಿತು ಎಂದುಕೊಳ್ಳುವಷ್ಟರಲ್ಲಿ ತಡವಾಗುತ್ತದೆ ಅಥವಾ ತಾತ್ಕಾಲಿಕವಾಗಿ ಮುಂದಕ್ಕೆ ಹೋಗುತ್ತದೆ. ಆದರೆ ಇದೇ ವಿಚಾರವನ್ನು ಮುಂದೆ ಮಾಡಿಕೊಂಡು, ಯಾರೊಂದಿಗೂ ಹಗೆ ಸಾಧಿಸಬೇಡಿ.

Today astrology in kannada today horoscope in kannada
ಸ್ವಂತ ಹಿತಾಸಕ್ತಿಗಳನ್ನು ಬದಿಗಿಟ್ಟು, ಈ ಸಂದರ್ಭದಲ್ಲಿ ನೀವು ಮಾಡಿದ ಕೆಲಸಗಳನ್ನು ಮೇಲಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಕೃಷಿಕರಿಗೆ ಬ್ಯಾಂಕ್ ವ್ಯವಹಾರಗಳಲ್ಲಿ ಇದ್ದ ಅಡೆತಡೆಗಳನ್ನು ನಿವಾರಣೆ ಆಗುವ ಸಾಧ್ಯತೆ ಇದೆ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಬೇರೆಯವರಿಗೆ ಸಹಾಯ ಮಾಡಿ. ಮನಸಿಗೆ ಸಮಾಧಾನ ಸಿಗುತ್ತದೆ.

Today astrology in kannada today horoscope in kannada
ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ‌ಎ‌ಚ್ಚರಿಕೆಯಿಂದ ಇರಬೇಕು. ಅಂತರಂಗದ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಸ್ನೇಹಿತರು- ಬಂಧುಗಳ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಳ್ಳಿ. ನಾನು ಮಾಡಿದ್ದೆಲ್ಲವೂ ಸರಿ ಎಂಬ ಧೋರಣೆಯಿಂದ ಹೊರಗೆ ಬಂದರೆ ಬಹಳ ಸಮಸ್ಯೆಗಳು ನಿವಾರಣೆ ಆಗುತ್ತವೆ.

Today astrology in kannada today horoscope in kannada
ವೇದಾಧ್ಯಯನ ಮಾಡುತ್ತಿರುವವರಿಗೆ, ಪುರೋಹಿತ- ಜ್ಯೋತಿಷ ವೃತ್ತಿಯಲ್ಲಿ ಇರುವವರಿಗೆ, ಅಡುಗೆ ಕಾಂಟ್ರ್ಯಾಕ್ಟ್ ಮಾಡಿಸುವಂತಹವರಿಗೆ ಸಾಲಗಾರರ ಹಿಂಸೆ ಜಾಸ್ತಿ ಆಗುತ್ತದೆ. ಮಾನಸಿಕ ಕಿರಿಕಿರಿಯಿಂದ ಜಗಳ ಮಾಡಿಕೊಂಡು, ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಹುದು. ಎಚ್ಚರಿಕೆಯಿಂದ ಇರಿ.

Today astrology in kannada today horoscope in kannada
ಎಲ್ಲರೂ ನಿಮ್ಮ ರೀತಿಯೇ ಆಲೋಚನೆ ಮಾಡಬೇಕು ಎಂದುಕೊಳ್ಳುವುದು ಸರಿಯಲ್ಲ. ಸೋದರ- ಸೋದರಿಯರ ಜತೆಗೆ ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ರಾಜೀ- ಸಂಧಾನಕ್ಕೆ ಸೂಕ್ತ ವೇದಿಕೆ ದೊರೆಯಲಿದೆ. ಭಾವನಾತ್ಮಕ ಸನ್ನಿವೇಶದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ.

Today astrology in kannada today horoscope in kannada
ವಲಸೆ ಸಿಬ್ಬಂದಿ, ಕಾರ್ಮಿಕರಿಗೆ ಸದ್ಯದ ಸಮಸ್ಯೆಯಿಂದ ಪರಿಹಾರ ಗೋಚರಿಸಲಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾರ ಬಳಿ ಈ ಹಿಂದೆ ನೆರವು ಪಡೆದಿದ್ದರೋ ಅಂಥವರಿಗೆ ಸಹಾಯ ಪಡೆಯಲು ಅವಕಾಶ ದೊರೆಯುತ್ತದೆ. ದೈವಾನುಗ್ರಹ ಇರುವುದರಿಂದ ಧೈರ್ಯ ಇರುತ್ತದೆ.

Today astrology in kannada today horoscope in kannada
ಉದ್ಯೋಗ ವಿಚಾರದಲ್ಲಿ ಬಹಳ ಕಿರಿಕಿರಿ ಆಗಬಹುದು. ಕೆಲಸ ಬಿಡುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಮಾನಸಿಕವಾಗಿ ಬಹಳ ಒತ್ತಡ ಬೀಳಲಿದೆ. ಇಷ್ಟು ಸಮಯ ಯಾರನ್ನು ನಂಬಿದ್ದರೋ ಅಂಥವರಿಂದ ವಂಚನೆ ಆಗುವ ಸಾಧ್ಯತೆ ಇದ್ದು, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ತುಂಬ ಮುಖ್ಯ.

Today astrology in kannada today horoscope in kannada
ನೀವೇ ಹುಡುಕಿಕೊಂಡ ಆಯ್ಕೆಗಳ ಬಗ್ಗೆ ಗೊಂದಲ ಸೃಷ್ಟಿಯಾಗುತ್ತದೆ. ಇತರರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಅನವಶ್ಯಕವಾಗಿ ಒಂದೇ ಕೆಲಸವನ್ನು ಎರಡೆರಡು ಸಲ ಮಾಡಬೇಕಾಗುತ್ತದೆ. ತಾಳ್ಮೆ ಇರಲಿ.

Today astrology in kannada today horoscope in kannada
ಗುರುಗಳ ಅನುಗ್ರಹ ನಿಮ್ಮ ಮೇಲೆ ಇರಲಿದೆ. ಕೆಲಸ- ಕಾರ್ಯದಲ್ಲಿನ ನಿಮ್ಮ ಚುರುಕನ್ನು ಗಮನಿಸಿದ ಇತರರು ಅವಕಾಶವನ್ನು ನೀಡಲಿದ್ದಾರೆ. ಇದನ್ನು ನೀವು ಹೇಗೆ ಬಳಸಿಕೊಳ್ಳಲಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ. ಆ ಮೂಲಕ ನೆಮ್ಮದಿ ಕಂಡುಕೊಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement