ಇಂದಿನ ಭವಿಷ್ಯ ಮಾರ್ಚ್ 26, 2020

Todays horoscope in kannada Todays astrology in kannada

Today astrology in kannada today horoscope in kannada

ಹೊಸ ಗ್ಯಾಜೆಟ್ ಖರೀದಿ ಮಾಡಬೇಕು ಅಥವಾ ಬೇರೆಯವರಿಂದ ಪಡೆದುಕೊಳ್ಳಬೇಕು ಎಂಬ ಸನ್ನಿವೇಶ ಸೃಷ್ಟಿಯಾಗುತ್ತದೆ. ಇತರರು ನಿಮ್ಮನ್ನು ಮಾದರಿಯಾಗಿ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಯಾವುದೇ ಪ್ರಚಾರ ಇಲ್ಲದೆ ನೀವು ಮಾಡಿದ್ದ ಉತ್ತಮ ಕೆಲಸಗಳಿಗೆ ಈಗ ಮನ್ನಣೆ ಸಿಗುತ್ತದೆ.

Today astrology in kannada today horoscope in kannada

ತಲೆ ಹಾಗೂ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಳೇ ಸ್ನೇಹಿತರು ನಿಮ್ಮ ಬಳಿ ಯಾವುದಾದರೂ ಸಹಾಯ ಕೇಳಬಹುದು. ಅವರಿಂದ ನೀವು ಈ ಹಿಂದೆ ಪಡೆದಿದ್ದ ಸಹಾಯವನ್ನು ನೆನಪಿಸಿಕೊಂಡು, ಆ ನಂತರ ನಿಮ್ಮ ತೀರ್ಮಾನವನ್ನು ತಿಳಿಸಿ. ಹಿರಿಯರಿಗೆ ವಯೋಸಹಜವಾಗಿ ಮರೆವು ಕಾಡಲಿದೆ.

Today astrology in kannada today horoscope in kannada

ಉದ್ಯೋಗ ಸ್ಥಳದಲ್ಲಿನ ಹಲವು ಬದಲಾವಣೆಗಳು ಅನಿಶ್ಚಿತತೆಗೆ ದೂಡಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ನಿರೀಕ್ಷಿತ ಸ್ಪಂದನೆ ದೊರೆಯುವುದಿಲ್ಲ. ಸ್ವಭಾವದಿಂದಲೇ ಚಂಚಲಚಿತ್ತರಾದ ನಿಮಗೆ ಅದು ಈ ದಿನ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅಂತರಂಗದ ರಹಸ್ಯವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

Today astrology in kannada today horoscope in kannada

ಯಾವುದೇ ವಿಷಯದಲ್ಲಿ ದ್ವೇಷಸಾಧನೆ ಮಾಡುವುದು ತರವಲ್ಲ. ಕೆಲಸ ಆಗಬೇಕು ಅಂತಾದಾಗ ವೈಯಕ್ತಿಕವಾದ ದ್ವೇಷ ಮರೆತು, ಮುಂದಕ್ಕೆ ಹೆಜ್ಜೆ ಇಡಬೇಕಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ವರ್ಗಾವಣೆ ಬಗ್ಗೆ ಚರ್ಚೆ ಆಗಬಹುದು. ಇದರಿಂದ ನಿಮ್ಮಲ್ಲಿ ಆತಂಕವೊಂದು ಸೃಷ್ಟಿಯಾಗುತ್ತದೆ.

Today astrology in kannada today horoscope in kannada

ನಿಮ್ಮಿಂದ ಸಹಾಯ ಪಡೆದವರೇ ವಂಚಿಸಲು ಹವಣಿಸುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರುತ್ತದೆ. ಸ್ವತಂತ್ರ ಆಲೋಚನೆಯ ನಿಮ್ಮ ಸ್ವಭಾವಕ್ಕೆ ಒಗ್ಗದವರ ಜತೆಯಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಸ್ವಲ್ಪ ಮಟ್ಟಿಗೆ ನಿಶ್ಶಕ್ತಿ, ಕೆಲಸದಲ್ಲಿ ಉದಾಸೀನ ಕಾಣಿಸಿಕೊಳ್ಳಬಹುದು.

Today astrology in kannada today horoscope in kannada

ಕಾನೂನು ಮೀರುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ. ನಿಮ್ಮ ಪ್ರಭಾವವನ್ನು ಬಳಸಿ, ಅದರಿಂದ ತಪ್ಪಿಸಿಕೊಳ್ಳಬಹುದು ಎಂಬ ಯೋಚನೆಯನ್ನು ಬಿಡಿ. ಹೊಸ ವ್ಯಾಪಾರ- ವ್ಯವಹಾರ ಶುರು ಮಾಡುವುದಕ್ಕೆ ಈಗಾಗಲೇ ಹಣ ಖರ್ಚು ಮಾಡಿದವರಿದ್ದಲ್ಲಿ ಅದರಿಂದ ಹಿಂದೆ ಸರಿಯುವುದು ಉತ್ತಮ.

Today astrology in kannada today horoscope in kannada

ನಿಮ್ಮ ನಾಯಕತ್ವ ಗುಣಕ್ಕೆ, ಲೆಕ್ಕಾಚಾರದ ಆಲೋಚನೆಗಳಿಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ಬ್ಯಾಂಕ್ ವ್ಯವಹಾರಗಳು ಇದ್ದಲ್ಲಿ ಸ್ನೇಹಿತರು- ಸಂಬಂಧಿಗಳ ಸಹಾಯದಿಂದ ಅದನ್ನು ಪೂರ್ತಿಗೊಳಿಸುವಿರಿ. ಅಧ್ಯಾತ್ಮ ಚಿಂತನೆಯತ್ತ ಮನಸ್ಸು ವಾಲುತ್ತದೆ. ಸೋದರ- ಸೋದರಿಯರ ನೆರವು ದೊರೆಯುತ್ತದೆ.

Today astrology in kannada today horoscope in kannada

ಕುಟುಂಬ ಸದಸ್ಯರಲ್ಲಿನ ಭಿನ್ನಾಭಿಪ್ರಾಯ ಬಗೆಹರಿಸುವಲ್ಲಿ ನೀವು ಯಶಸ್ವಿ ಆಗುತ್ತೀರಿ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುತ್ತದೆ. ಸಾಲ ವಸೂಲಿಗೆ ಪ್ರಯತ್ನಿಸಿದರೆ ಅದು ಸಾಧ್ಯವಾಗಲಿದೆ. ಗುರು- ಹಿರಿಯರ ಭೇಟಿಯಿಂದ ಮನಸ್ಸಿಗೆ ಸಂತಸವಿದೆ.

Today astrology in kannada today horoscope in kannada

ನಿರ್ಧಾರಗಳನ್ನು ಮಾಡುವಾಗ ವಾಸ್ತವ ನೆಲೆಗಟ್ಟಿನಲ್ಲಿ ಆಲೋಚನೆ ಮಾಡಿ. ಎಂದೋ ಆದ ಘಟನೆಯನ್ನು ಗಮನದಲ್ಲಿ ಇಟ್ಟುಕೊಂಡು, ಈಗ ಯಾವುದೇ ವ್ಯವಹಾರ ನಡೆಸಬೇಡಿ. ಮರೆವಿನ ಕಾರಣಕ್ಕೆ ಮಹತ್ವದ ದಾಖಲೆಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆ ಬಗ್ಗೆ ಎಚ್ಚರಿಕೆ ಇರಲಿ.

Today astrology in kannada today horoscope in kannada

ಯಾರದೋ ಹಣಕಾಸಿನ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಲು ಮುಂದಾಗುವಿರಿ. ಇದರಿಂದ ಆರ್ಥಿಕ ಒತ್ತಡ ಹೆಚ್ಚಾಗಲಿದೆ. ಸಣ್ಣ- ಪುಟ್ಟ ವಿಚಾರಗಳಿಗೂ ಕೂಗಾಟ- ಕಿರುಚಾಟ ಮಾಡಿದರೆ ಆಪ್ತರ ಜತೆಗಿನ ಸಂಬಂಧವೇ ಹಾಳು ಎಂಬುದು ಗೊತ್ತಿರಲಿ, ಸಂಗಾತಿ- ಮಕ್ಕಳು ಹೇಳಿದ ಮಾತನ್ನು ಕೇಳಿಸಿಕೊಳ್ಳಿ.

Today astrology in kannada today horoscope in kannada

ಹಣಕಾಸಿನ ಮುಗ್ಗಟ್ಟಿನಿಂದ ಹೊರಬರುವುದಕ್ಕೆ ಹಲವು ಪ್ರಯತ್ನ ನಡೆಸಲಿದ್ದೀರಿ. ದೀರ್ಘ ಕಾಲದ ಪ್ರೇಮ ಸಂಬಂಧಗಳಲ್ಲಿ ಮನಸ್ತಾಪ ಕಾಣಿಸಿಕೊಳ್ಳಬಹುದು. ಪಾರದರ್ಶಕತೆಯಿಂದ ನಡೆದುಕೊಳ್ಳಲು ಪ್ರಯತ್ನಿಸಿ, ಯಾವುದೇ ವಿಚಾರವನ್ನು ಮುಚ್ಚಿಡಬೇಡಿ. ಸಂಸಾರದ ಗುಟ್ಟನ್ನು ಕಾಪಾಡಿಕೊಳ್ಳಿ.

Today astrology in kannada today horoscope in kannada

ನಿಮ್ಮ ದೈವ ಭಕ್ತಿಗೆ ಸೂಕ್ತವಾದ ವಾತಾವರಣ ಸೃಷ್ಟಿಯಾಗಲಿದೆ. ಇತರರು ನಿಮ್ಮ ಕೆಲಸ- ಕಾರ್ಯಗಳಿಗೆ ಬೆಂಬಲ ನೀಡಲಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚೇತರಿಕೆ ಕಾಣಿಸಿಕೊಳ್ಳುತ್ತದೆ. ವಿದೇಶದಲ್ಲಿ ಇರುವ ಬಂಧುಗಳಿಂದ ಶುಭ ವಾರ್ತೆಯನ್ನು ಕೇಳಲಿದ್ದೀರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement