ನೀವು ಬಹಳ ನಂಬಿದ ವ್ಯಕ್ತಿಗಳಿಂದ ಮೋಸವಾಗುವ ಸಾಧ್ಯತೆ ಇದೆ. ಆಸ್ತಿ- ವಾಹನ ಮಾರಾಟಕ್ಕೆ ಮುಂದಾಗಿರುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾದ ಕಾಗದ ಪತ್ರಗಳನ್ನು ಮುಂಚಿತವಾಗಿಯೇ ನೀಡಬೇಡಿ. ಇದರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ಆ ಕಾರಣಕ್ಕೆ ಎಚ್ಚರಿಕೆಯಿಂದ ಇರಬೇಕು.
ಟೆಕ್ಸ್ ಟೈಲ್ ವ್ಯಾಪಾರ ಮಾಡುತ್ತಿರುವವರಿಗೆ ಒತ್ತಡದ ಸಮಯ ಇದೆ. ಸಾಲ ತಂದು, ವ್ಯಾಪಾರ ನಡೆಸಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ಸಂಗಾತಿಯ ಸಲುವಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡಲಿದ್ದೀರಿ. ಈ ದಿನ ನಿಮಗೆ ದೃಷ್ಟಿ ದೋಷ ಆಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ.
ಚೀಟಿ ವ್ಯವಹಾರ ನಡೆಸುತ್ತಿರುವವರಿಗೆ ಭವಿಷ್ಯದ ಬಗ್ಗೆ ಮುನ್ಸೂಚನೆ ಸಿಗಲಿದೆ. ಯಾರಿಂದ ಸಹಾಯ ಪಡೆಯುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಸಣ್ಣ-ಪುಟ್ಟ ಪ್ರಯಾಣಗಳನ್ನು ಮುಂದೂಡಲಿದ್ದೀರಿ. ಹೊಸ ಆದಾಯ ಮೂಲಗಳನ್ನು ಹುಡುಕಿಕೊಳ್ಳಲಿದ್ದೀರಿ. ಸಂಗಾತಿಯ ಬೆಂಬಲ ದೊರೆಯುತ್ತದೆ.
ಕಂಪ್ಯೂಟರ್ ಗೆ ಸಂಬಂಧಿಸಿದ ವ್ಯವಹಾರ- ವ್ಯಾಪಾರ ಮಾಡುವವರಿಗೆ ಲಾಭ ಇದೆ. ದೀರ್ಘ ಕಾಲದ ಸಾಲ ಬಾಧೆಗಳನ್ನು ನಿವಾರಿಸಿಕೊಳ್ಳಲು ದಾರಿ ಗೋಚರಿಸುತ್ತದೆ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರು ವ್ಯಾಪಾರ ವಿಸ್ತರಣೆಗಾಗಿ ಮಾಡಿಕೊಂಡಿದ್ದ ಯೋಜನೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಿದ್ದೀರಿ.
ಮಕ್ಕಳಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಮುಂಜಾಗ್ರತಾ ಕ್ರಮವಾಗಿ ಕೂಡಿಟ್ಟಿದ್ದ ಹಣವನ್ನು ತೆಗೆಯಬೇಕಾಗುತ್ತದೆ. ದೂರದ ಊರುಗಳಿಂದ ಶುಭ ಸುದ್ದಿ ಕೇಳಲಿದ್ದೀರಿ. ದೇವತಾರಾಧನೆ, ದಾನ- ಧರ್ಮಾದಿ ಕಾರ್ಯಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಇದಕ್ಕಾಗಿ ಸಾಲ ಪಡೆಯುವ ಸಾಧ್ಯತೆ ಇದೆ.
ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಎಂದು ಪ್ರಯತ್ನಿಸುವುದು ತಪ್ಪಲ್ಲ. ಆದ್ದರಿಂದ ಎಲ್ಲರಿಂದಲೂ ಎಲ್ಲ ಸಂದರ್ಭದಲ್ಲೂ ಇದು ಸಾಧ್ಯವಿಲ್ಲ ಎಂಬುದರ ವಾಸ್ತವ ಅರಿತುಕೊಂಡರೆ ನೆಮ್ಮದಿ ಇರುತ್ತದೆ. ಹೊಂದಾಣಿಕೆ ಸ್ವಭಾವ ರೂಢಿಸಿಕೊಳ್ಳದಿದ್ದರೆ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಲಿದೆ.
ಆಕಸ್ಮಿಕವಾಗಿ ಧನಲಾಭ ಆಗಬಹುದು. ಸಂಗಾತಿ ಹಾಗೂ ಮಕ್ಕಳ ಜತೆಗೆ ಸಮಯ ಕಳೆಯಲಿದ್ದೀರಿ. ಮನರಂಜನೆಗಾಗಿ ಹಣ ಖರ್ಚು ಮಾಡಲಿದ್ದೀರಿ. ಸಂಬಂಧಿಕರು ನೆರವು ಕೇಳಬಹುದು. ನಿಮ್ಮಿಂದ ಆ ಸಹಾಯ ಮಾಡಲು ಆಗದಿದ್ದಲ್ಲಿ ನಯವಾಗಿ ತಿರಸ್ಕರಿಸಿ. ಅವರ ಮನಸಿಗೆ ಬೇಸರ ಆಗುವಂಥ ಮಾತುಗಳನ್ನು ಆಡಬೇಡಿ.
ಸೂಕ್ತ ವಿವಾಹ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ಇದೆ. ಸ್ವಾದಿಷ್ಟವಾದ ಊಟ- ತಿಂಡಿ ಮಾಡುವ ಯೋಗ ಇದೆ. ಸಹೋದ್ಯೋಗಿಗಳಿಗೆ ನಿಮ್ಮ ನೆರವಿನ ಅಗತ್ಯ ಬರಲಿದ್ದು, ಅವರ ನೆರವಿಗೆ ಲಭ್ಯ ಇರುವಂತೆ ನೋಡಿಕೊಳ್ಳಿ. ಹೊಸ ವ್ಯಾಪಾರ- ವ್ಯವಹಾರ ಆರಂಭಿಸುವುದಕ್ಕೆ ಆಲೋಚನೆ ಮಾಡುತ್ತೀರಿ.
ಸಂಗಾತಿ ಜತೆಗೆ ಯಾವುದೇ ಮುಖ್ಯ ವಿಷಯವನ್ನು ಮುಚ್ಚಿಡಬೇಡಿ. ಸಾಧ್ಯವಾದಷ್ಟೂ ಪಾರದರ್ಶಕವಾಗಿ ಇರಲು ಪ್ರಯತ್ನಿಸಿ. ಹಳೇ ಪ್ರೇಮ ಪ್ರಕರಣಗಳು ಮರುಕಳಿಸಿ, ಮುಜುಗರ ಆಗುವಂತೆ ಮಾಡಬಹುದು. ಆದ್ದರಿಂದ ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಗೃಹಾಲಂಕಾರ ವಸ್ತುಗಳ ಖರೀದಿಗೆ ಯೋಜನೆ ರೂಪಿಸುತ್ತೀರಿ.
ಭವಿಷ್ಯದ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಹಣಕಾಸಿನ ಗೊಂದಲಗಳು ಬಗೆಹರಿದು, ಮುಂದೇನು ಎಂಬ ಚಿಂತೆ ದೂರವಾಗುತ್ತದೆ. ಎಂದೋ ನೀವು ಮಾಡಿದ ಕೆಲಸಗಳನ್ನು ಮೆಚ್ಚಿ, ಹೊಸ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ದೀರ್ಘ ಕಾಲದ ಸಂಬಂಧಗಳು ಅಂತಿಮ ರೂಪ ಪಡೆದುಕೊಳ್ಳುತ್ತವೆ.
ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬ ಸದಸ್ಯರ ಸಲುವಾಗಿ ಹೆಚ್ಚು ಖರ್ಚು ಮಾಡಲಿದ್ದೀರಿ. ಕಟ್ಟಡ ನಿರ್ಮಾಣ ಕಾರ್ಯಗಳು ಇದ್ದಲ್ಲಿ ವಿಳಂಬವಾಗಲಿದೆ. ಸರ್ಕಾರದಿಂದ ಬಾಕಿ ಹಣ ಬರಬೇಕಿದ್ದಲ್ಲಿ ಭಾರೀ ಪ್ರಯತ್ನ ಪಡಬೇಕಾಗುತ್ತದೆ. ನಿಮ್ಮ ಮಾತುಗಳ ಮೂಲಕ ಇತರರನ್ನು ಆಕರ್ಷಿಸುತ್ತೀರಿ.
ವಿನಾಕಾರಣ ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಯಾರದು ತಪ್ಪು- ಯಾರದು ಸರಿ ಎಂಬುದಕ್ಕಿಂತ ಹೆಚ್ಚಾಗಿ ನೆಮ್ಮದಿ ಹಾಳಾಗುತ್ತದೆ. ನೀವಾಡುವ ಮಾತಿಗೆ ಇಲ್ಲದ ಅರ್ಥ ಕಲ್ಪಿಸಿ ವರ್ಚಸ್ಸಿಗೆ ಹಾನಿ ಮಾಡಲಾಗುತ್ತದ. ಆದ್ದರಿಂದ ಮೌನವಾಗಿರಲು ಪ್ರಯತ್ನಿಸಿ. ಬೇರೆಯವರ ವಿಚಾರಗಳಿಗೆ ಮೂಗು ತೂರಿಸಬೇಡಿ.
Tags:
ದಿನ ಭವಿಷ್ಯ