ಅಂದುಕೊಂಡಂತೆ ಯಾವ ಕೆಲಸವೂ ಸಾಗುವುದಿಲ್ಲ. ಗಡುವಿನೊಳಗೆ ಪೂರ್ಣಗೊಳಿಸಬೇಕಿದ್ದ ಕೆಲಸಗಳು ಮುಂದಕ್ಕೆ ಹೋಗುವುದರಿಂದ ಆರ್ಥಿಕವಾಗಿ ನಷ್ಟ ಅನುಭವಿಸುವ ಜತೆಗೆ ಹೆಸರು ಕೂಡ ಹಾಳಾಗಬಹುದು. ಆದ್ದರಿಂದ ಆದ್ಯತೆ ಮೇಲೆ ಕೆಲಸ ಪೂರ್ಣ ಮಾಡಲು ಪ್ರಯತ್ನಿಸಿ. ತಡವಾಗುವ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಿ.
ಬಡ್ತಿ- ವರ್ಗಾವಣೆ ನಿರೀಕ್ಷೆಯಲ್ಲಿ ಇರುವವರಿಗೆ ಯಾವುದೇ ಖಚಿತ ವರ್ತಮಾನ ದೊರೆಯುವುದಿಲ್ಲ. ಡೇರಿ ವ್ಯವಹಾರ ಮಾಡುತ್ತಿರುವವರಿಗೆ ಸಣ್ಣ ಪ್ರಮಾಣದಲ್ಲಾದರೂ ನಷ್ಟ ಅನುಭವಿಸುವ ಯೋಗ ಇದೆ. ಹೊಸ ಬಟ್ಟೆ ಖರೀದಿ ಮಾಡುವುದಕ್ಕೆ ಹೆಚ್ಚು ಹಣ ಖರ್ಚು ಮಾಡಲಿದ್ದೀರಿ.
ಕಟ್ಟಡ ನಿರ್ಮಾಣಕ್ಕಾಗಿ ಹಣ ಹೊಂದಿಸುತ್ತಿರುವವರಿಗೆ ದಾಖಲೆ- ಪತ್ರಗಳ ಸಮಸ್ಯೆ ಎದುರಾಗಬಹುದು. ನೀವು ಈ ಹಿಂದೆ ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತಾಪ ಪಡುವಂತಾಗುತ್ತದೆ. ಉದ್ಯೋಗ ಬದಲಾವಣೆ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಹೊಸ ಅವಕಾಶಗಳು ಗೋಚರಿಸಲಿವೆ.
ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವವರಿಗೆ ಒಂದೇ ಸಮಯಕ್ಕೆ ಹಲವರು ಒತ್ತಡ ಹೇರಲು ಆರಂಭಿಸುತ್ತಾರೆ. ಮನೆ ನಿರ್ಮಾಣ ಮಾಡುತ್ತಿರುವವರಿಗೆ ಹಿನ್ನಡೆ ಅಥವಾ ವಿಳಂಬ ಆಗುತ್ತದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಪ್ರಗತಿ ಇದೆ. ಸಂಸಾರದ ಗುಟ್ಟನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಹೂಡಿಕೆಯಲ್ಲಿ ಏರಿಳಿತಗಳು ಕಂಡುಬರುತ್ತವೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಸರ್ಕಾರಿ ಕೆಲಸಗಳ ಕಾಂಟ್ರ್ಯಾಕ್ಟರ್ ಗಳಿದ್ದಲ್ಲಿ ಬಾಕಿ ಹಣ ಬರುವ ಸಾಧ್ಯತೆ ಇದೆ. ಆಪ್ತರ ಜತೆಗೆ ಹಣಕಾಸಿನ ವಿಷಯವಾಗಿ ವೈಮನಸ್ಯ ಬೆಲೆಯಬಹುದು, ಎಚ್ಚರಿಕೆ.
ಸಂಬಂಧದಲ್ಲೇ ಮದುವೆ ಆಗಿರುವವರಿಗೆ ಖರ್ಚು ಹೆಚ್ಚಳವಾಗುತ್ತದೆ. ತಂದೆ- ತಾಯಿ ಆರೋಗ್ಯ ತಪಾಸಣೆಗೆ ಸಾಲ ಪಡೆಯಬೇಕಾದ ಸ್ಥಿತಿ ಎದುರಾಗಬಹುದು. ಕೃಷಿಕರಿಗೆ ಅನಿರೀಕ್ಷಿತವಾಗಿ ಧನಾಗಮ ಆಗುವ ಯೋಗ ಇದೆ. ಕಲಾವಿದರು, ರಾಜಕಾರಣಗಳಿಗೆ ಬಿಡುವಿಲ್ಲದಂಥ ಕೆಲಸ ಇರುತ್ತದೆ.
ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಪ್ರಗತಿ ಇದೆ. ಹೊಸ ಉದ್ಯಮ ಸ್ಥಾಪನೆ ಮಾಡಬೇಕು ಎಂಬ ಆಲೋಚನೆಯಲ್ಲಿ ಇರುವವರಿಗೆ ಕಾನೂನು ಸಮಸ್ಯೆಗಳು ಕಾಡಬಹುದು. ಹಳೇ ಗೆಳೆಯರು ಅಥವಾ ಸಂಬಂಧಿಕರನ್ನು ಭೇಟಿ ಆಗುವ ಯೋಗ ಇದೆ. ಆಪ್ತರ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ.
ಪ್ರೇಮಿಗಳಿಗೆ ಸಂತಸದ ದಿನ ಇದು. ಬೆಲೆ ಬಾಳುವ ಉಡೂಗೊರೆಯನ್ನು ಪಡೆಯುವ ಯೋಗ ಇದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಗೋಚರಿಸಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಒತ್ತಡ ಇರುತ್ತದೆ. ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ ಇದೆ.
ಅನುಮಾನ ಹೆಚ್ಚಾಗಿರುತ್ತದೆ. ಹತ್ತಿರದವರೇ ಹಣಕಾಸಿನ ವಿಚಾರದಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಭಾವನೆ ನಿಮ್ಮನ್ನೆ ಕಾಡಲಿದೆ. ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಬೇಕಾಗುವುದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಮನರಂಜನೆ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡಲಿದ್ದೀರಿ.
ನಿಮ್ಮ ಅಗತ್ಯ ಸಂದರ್ಭಕ್ಕೆ ಸ್ನೇಹಿತರು, ಸಂಬಂಧಿಗಳಿಂದ ನೆರವು ದೊರೆಯುತ್ತದೆ. ಉಳಿತಾಯ ಮಾಡಿಟ್ಟಿದ್ದ ಹಣದಲ್ಲಿ ಖರ್ಚು ಮಾಡಲಿದ್ದೀರಿ. ಭೂಮಿ- ಆಸ್ತಿ ವಿಚಾರದಲ್ಲಿ ಆಸ್ಥೆ ವಹಿಸಿ, ದಾಖಲೆ- ಪತ್ರಗಳನ್ನು ಒಟ್ಟುಗೂಡಿಸಿಕೊಳ್ಳುತ್ತೀರಿ. ರುಚಿಕಟ್ಟಾದ ಊಟ ಸವಿಯುವ ಯೋಗ ಇದೆ.
ಕಿರು ಪ್ರವಾಸವನ್ನು ಮಾಡುವ ಯೋಗ ಇದೆ. ಉದ್ಯೋಗವೋ ಅಥವಾ ವೈಯಕ್ತಿಕ ಕಾರಣಕ್ಕಾಗಿಯೋ ಪ್ರಯಾಣ ಮಾಡಲಿದ್ದೀರಿ. ಬಹಳ ಸಮಯದಿಂದ ಬಾಕಿ ಉಳಿದ ಹಣಕ್ಕೆ ನೀವು ಪ್ರಯತ್ನಿಸಿದರೆ ಹಿಂತಿರುಗುವ ಅವಕಾಶಗಳು ಹೆಚ್ಚಿವೆ. ತಂದೆ ಅಥವಾ ಸೋದರ ಹಣಕಾಸಿನ ನೆರವು ಕೇಳಬಹುದು.
ವಿಶ್ರಾಂತಿ ಇಲ್ಲದಂತೆ ಆಗುತ್ತದೆ. ಕೆಲಸಗಳು ಅಂದುಕೊಂಡ ಸಮಯದಲ್ಲಿ ಮುಗಿಯದೆ ಬೇಸರಕ್ಕೆ ಕಾರಣವಾಗುತ್ತದೆ. ಸಂಗೀತಗಾರರು, ಪ್ರವಚನಕಾರರಿಗೆ ಆದಾಯದಲ್ಲಿ ಇಳಿಕೆಯಾಗುತ್ತದೆ. ಬೇರೆಯವರಿಗೆ ನೆರವು ನೀಡುವುದಾಗಿ ಭಾಷೆ ನೀಡುವ ಮುಂಚೆ ಪೂರ್ವಾಪರ ಆಲೋಚಿಸಿ.
Tags:
ದಿನ ಭವಿಷ್ಯ












