ನಿಮ್ಮ ಮಾತಿಗೆ ವಿರೋಧ ಮಾಡಲೇಬೇಕು ಎಂದು ನಿರ್ಧರಿಸಿರುವಂತೆ ಕೆಲವರು ಅಡ್ಡಗಾಲು ಹಾಕುತ್ತಾರೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗುತ್ತದೆ. ಸಾಲ ಮರುಪಾವತಿಯಲ್ಲಿ ತಡವಾಗಿ, ಹೆಚ್ಚಿನ ಬಡ್ಡಿ ಪಾವತಿಸುವಂತಾಗಬಹುದು.
ಉದ್ಯೋಗ ಸ್ಥಳದಲ್ಲಿ ಖಚಿತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಸಹೋದ್ಯೋಗಿಗಳ ಜತೆ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಬಹಳ ಕಾಲದಿಂದ ಬರಬೇಕಿದ್ದ ಬಾಕಿಯನ್ನು ಈ ದಿನ ಪ್ರಯತ್ನಿಸಿದರೆ ಸ್ವಲ್ಪವಾದರೂ ವಸೂಲಿ ಮಾಡಬಹುದು. ಮನರಂಜನೆ ಸಲುವಾಗಿ ಖರ್ಚು ಮಾಡಲಿದ್ದೀರಿ.
ಮೇಲಧಿಕಾರಿಗಳ ಜತೆಗೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ಸಾಲ ಮಾಡಿಯಾದರೂ ಕೆಲ ಜವಾಬ್ದಾರಿಗಳನ್ನು ಪೂರ್ಣಗೊಳಿಸಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಆಲೋಚನೆ ಮಾಡುತ್ತಿರುವವರಿಗೆ ನಿಮ್ಮ ಆಯ್ಕೆಗೆ ಸೂಕ್ತವಾದ ವಾಹನ ದೊರೆಯುವ ಸಾಧ್ಯತೆ ಇದೆ.
ವೇದ- ಜ್ಯೋತಿಷ್ಯ ಅಧ್ಯಯನ ಮಾಡುತ್ತಿರುವವರಿಗೆ ಶೈಕ್ಷಣಿಕವಾಗಿ ಪ್ರಗತಿ ಕಾಣಲಿದೆ. ಪತ್ರಕರ್ತರು- ಕಲಾವಿದರಿಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಬ್ಯಾಂಕ್ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಮುಖ್ಯ ಕಾಗದ ಪತ್ರಗಳನ್ನು ಕಳೆದುಕೊಳ್ಳುವ ಯೋಗ ಇದೆ.
ಆಪ್ತರ ಬಗ್ಗೆ ಅನುಮಾನ ಮೂಡುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಆದರೆ ನಿಮ್ಮ ಲೆಕ್ಕಾಚಾರದ ನಡೆಯ ಮೂಲಕ ಅದನ್ನು ಶೀಘ್ರವೇ ಬಗೆಹರಿಸಿಕೊಳ್ಳಲಿದ್ದೀರಿ. ಹೊಸ ಗ್ಯಾಜೆಟ್, ಮೊಬೈಲ್ ಅಥವಾ ಲ್ಯಾಪ್ ಟಾಪ್ ಖರೀದಿ ಮಾಡುವ ಸಲುವಾಗಿ ವಿಚಾರಣೆ ಮಾಡಲಿದ್ದೀರಿ.
ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯ ಸಿಗಲಿದೆ. ಹೆಚ್ಚಿನ ಹಣಕಾಸು ಮೂಲವೊಂದು ಗೋಚರಿಸಲಿದೆ. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹಣಕಾಸು ಉಳಿತಾಯ ಮಾಡಲು ಆಲೋಚನೆ ಮಾಡುತ್ತೀರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ.
ಯಾರದೋ ಮೇಲಿನ ಸವಾಲಿಗೆ ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕಿ, ದುಡಿಯಬೇಕಾಗುತ್ತದೆ. ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವುದಕ್ಕೆ ನಾನಾ ಯೋಜನೆಗಳನ್ನು ರೂಪಿಸುತ್ತೀರಿ. ದೇವತಾರಾಧನೆ, ಪೂಜೆ- ಪುನಸ್ಕಾರಗಳಿಗೆ ಇತರರಿಗೆ ನೆರವು ನೀಡಲಿದ್ದೀರಿ. ಇದರಿಂದ ಮೆಚ್ಚುಗೆಯ ಮಾತುಗಳನ್ನು ಕೇಳುತ್ತೀರಿ.
ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು, ಉದ್ಯಮಿಗಳು ವಿದೇಶ ವ್ಯವಹಾರ- ವ್ಯಾಪಾರ ವಿಚಾರದಲ್ಲಿ ಚಿಂತೆಗೆ ಒಳಗಾಗುತ್ತೀರಿ. ನಿಮ್ಮ ಆಲೋಚನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಕಾರಣಕ್ಕೆ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ಸಿಟ್ಟಾಗುತ್ತೀರಿ.
ಪ್ರೇಮ ಪ್ರಕರಣಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಮನೆಯಲ್ಲಿ ತಂದೆ- ತಾಯಿಯ ಬುದ್ಧಿ ಮಾತನ್ನು ಕೇಳಬೇಕಾಗುತ್ತದೆ. ನಿಮ್ಮ ಈ ಹಿಂದಿನ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಅನುಮಾನ ಪಡುವಂತೆ ಆಗುತ್ತದೆ. ಯಾರದೋ ದಾಕ್ಷಿಣ್ಯಕ್ಕೆ ಬಿದ್ದು, ಸತ್ಯ ಹೇಳಲಿಕ್ಕೆ ಆಗದ ಪರಿಸ್ಥಿತಿ ನಿರ್ಮಾಣ ಆಗುತ್ತದೆ.
ಸೋದರ- ಸೋದರ ಅಥವಾ ಬಂಧುಗಳಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಆಪ್ತರ ಜತೆಗೆ ಭಾವನಾತ್ಮಕವಾಗಿ ಇನ್ನೂ ಹೆಚ್ಚು ಹತ್ತಿರವಾಗಲಿದ್ದೀರಿ. ನಿಮ್ಮ ಲೆಕ್ಕಾಚಾರಗಳ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ಈ ದಿನ ತಾಳ್ಮೆಯಿಂದ ಇದ್ದಷ್ಟೂ ಹೆಚ್ಚು ಲಾಭ ನಿಮಗೆ ಆಗಲಿದೆ.
ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಸರ್ಕಾರಿ ಕೆಲಸ- ಕಾರ್ಯಗಳಿಗಾಗಿ ಪ್ರಯತ್ನಿಸುತ್ತಿರುವವರು ಆಂಜನೇಯ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ಮುಂದುವರಿಯಿರಿ. ಪ್ರೇಮಿಗಳಿಗೆ ಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ. ನಿಮ್ಮ ಮಾತಿನ ಮೂಲಕ ಇತರರನ್ನು ಆಕರ್ಷಿಸುತ್ತೀರಿ.
ಬಂಧು- ಸ್ನೇಹಿತರಿಂದ ಔತಣಕೂಟಕ್ಕೆ ಆಹ್ವಾನ ಬರುವ ಯೋಗ ಇದೆ. ಅಥವಾ ನೀವೇ ರುಚಿಕಟ್ಟಾದ ಅಡುಗೆ ಮಾಡಿಕೊಂಡು ಅಥವಾ ಮಾಡಿಸಿಕೊಂಡು ಸವಿಯುವ ಯೋಗ ಇದೆ. ದೂರದ ಸ್ಥಳದಿಂದ ಶುಭ ವಾರ್ತೆ ಕೇಳುವ ಯೋಗ ಇದೆ. ಸಂಗಾತಿ- ಮಕ್ಕಳ ಜತೆಗೆ ಉತ್ತಮ ಸಮಯ ಕಳೆಯುತ್ತೀರಿ.
Tags:
ದಿನ ಭವಿಷ್ಯ












