ಇತರರ ಸಲುವಾಗಿಯೇ ಬಹುತೇಕ ಸಮಯ ಮೀಸಲಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಅಲ್ಪ ಪ್ರಗತಿ ಇದೆ. ಮೌನವಾಗಿದ್ದುಕೊಂಡೇ ಹಲವು ಸಂಗತಿಗಳನ್ನು ಎದುರಿನವರಿಗೆ ದಾಟಿಸುತ್ತೀರಿ. ಮನೆ ನಿರ್ಮಾಣ ಕಾರ್ಯ ಕೈಗೊಂಡಿರುವವರಿಗೆ ಬ್ಯಾಂಕ್ ವ್ಯವಹಾರಗಳಲ್ಲಿ ಗೊಂದಲ ಕಾಣಿಸಿಕೊಳ್ಳುತ್ತದೆ.
ಕುಟುಂಬ ವ್ಯವಹಾರವನ್ನು ನೋಡಿಕೊಳ್ಳುತ್ತಿರುವವರು ವಿಸ್ತರಣೆ ಬಗ್ಗೆ ಆಲೋಚನೆ ಮಾಡುತ್ತೀರಿ. ಕೆಲವು ಅನಿವಾರ್ಯ ಖರ್ಚುಗಳನ್ನು ಮಾಡಬೇಕಾಗುತ್ತದೆ. ತಾಯಿಯ ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗ ಸ್ಥಳದಲ್ಲಿ ಹಳೆ ವ್ಯವಹಾರವೊಂದರ ಲೆಕ್ಕ ಸರಿಯಾಗಿ ಸಿಗದ ಒತ್ತಡ ಸನ್ನಿವೇಶ ಸೃಷ್ಟಿಯಾಗುತ್ತದೆ.
ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಗೃಹಾಲಂಕಾರ ವಸ್ತುಗಳ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ಇತರರ ಸಲುವಾಗಿ ಸಾಲ ತೆಗೆದುಕೊಳ್ಳುವುದು, ಕ್ರೆಡಿಟ್ ಕಾರ್ಡ್ ಬಳಸುವುದು ಮಾಡಬೇಡಿ. ಇದರಿಂದ ಮನಸ್ತಾಪ ಸೃಷ್ಟಿಯಾಗಬಹುದು. ವಿದೇಶಗಳಲ್ಲಿ ಕೆಲಸ ಮಾಡುವವರಿಗೆ ಒಂಟಿತನ ಕಾಡಲಿದೆ.
ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳು ಗೋಚರಿಸಲಿವೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಖರ್ಚು ಕಡಿಮೆ ಮಾಡಿಕೊಳ್ಳುವ ದಾರಿ ಹುಡುಕುತ್ತೀರಿ. ನೀವು ಆಡುವ ಮಾತಿಗೆ ನಾನಾ ಅರ್ಥ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ.
ತಂದೆಯ ಸಂತೋಷಕ್ಕಾಗಿ ಕೆಲವು ನಿರ್ಧಾರ- ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ಮಾತನ್ನು ಇತರರು ಶ್ರದ್ಧೆಯಿಂದ ಕೇಳುತ್ತಾರೆ, ಕೆಲಸ ಮಾಡಿಕೊಡುತ್ತಾರೆ. ಮಹತ್ತರವಾದ ಜವಾಬ್ದಾರಿಗಳನ್ನು ಸುಲಭವಾಗಿ ಪೂರೈಸುತ್ತೀರಿ. ಮೊಬೈಲ್, ಗ್ಯಾಜೆಟ್ ಖರೀದಿ ಮಾಡುವ ಸಾಧ್ಯತೆ ಇದೆ.
ಸಣ್ಣ-ಪುಟ್ಟ ವ್ಯಾಪಾರ ಮಾಡುತ್ತಿರುವವರಿಗೆ ಅನಿರೀಕ್ಷಿತವಾಗಿ ನಷ್ಟ ಕಾಣಬೇಕಾಗುತ್ತದೆ. ಸುಗಮವಾಗಿ ಆಗಬೇಕಾದ ಕೆಲಸಗಳಿಗೂ ನಾನಾ ಬಗೆಯ ಅಡೆತಡೆಗಳು ಕಾಣಿಸಿಕೊಳ್ಳುತ್ತವೆ. ವಿವಾಹ ನಿಶ್ಚಯ ಆಗಿರುವವರು ಮೂರನೇ ವ್ಯಕ್ತಿಗಳ ಚಾಡಿ ಮಾತನ್ನು ಕೇಳಿ ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಪಿತ್ರಾರ್ಜಿತವಾದ ಆಸ್ತಿ ವಿಚಾರದಲ್ಲಿ ಸೋದರ ಸಂಬಂಧಿಗಳ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಬಹುದು. ಮಾತನ್ನಾಡುವಾಗ ಅದರ ಪರಿಣಾಮಗಳನ್ನು ತಿಳಿದು, ಮಾತನಾಡಿ. ಇಲ್ಲದಿದ್ದಲ್ಲಿ ಸಂಬಂಧಗಳು ಹಾಳಾಗುತ್ತವೆ. ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವುದಕ್ಕೆ ಕೆಲವರು ಪ್ರಯತ್ನಿಸಬಹುದು, ಎಚ್ಚರ.
ದೇವತಾರಾಧನೆ, ಪೂಜೆ ಇತ್ಯಾದಿ ಕೆಲಸಗಳಿಗೆ ಹಣ ವಿನಿಯೋಗ ಆಗುವ ಯೋಗ ಇದೆ. ಬಹಳ ಕಾಲದಿಂದ ಬಾಕಿ ಉಳಿದಿದ್ದ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸಲು ಸಮಯ ಮೀಸಲಿಡಲಿದ್ದೀರಿ. ಖಾಸಗಿ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ವೇತನ ಹೆಚ್ಚಳ ಆಗುವ ಯೋಗ ಇದೆ.
ನಿಮ್ಮ ಉದ್ದೇಶಗಳನ್ನು ಇತರರು ಅನುಮಾನಿಸುವಂತೆ ಆಗುತ್ತದೆ. ಕೆಲವು ಪ್ರಶ್ನೆಗಳಿಂದ ಮುಜುಗರ ಎದುರಿಸುವಂತಾಗುತ್ತದೆ. ಮಕ್ಕಳ ಮದುವೆ ವಿಚಾರದಲ್ಲಿ ಹಿನ್ನಡೆ ಇದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕಾಗುತ್ತದೆ. ಕೊಟ್ಟ ಮಾತಿನಂತೆ ಹಣ ಮರುಪಾವತಿ ಮಾಡಲು ಆಗುವುದಿಲ್ಲ.
ಉದ್ಯೋಗದ ಕಡೆಗೆ ಹೆಚ್ಚಿನ ಗಮನ ವಹಿಸಬೇಕು. ಉದ್ಯೋಗದ ಹೊರತಾದ ಆದಾಯದ ದಾರಿಗೆ ಹೆಚ್ಚಿನ ಸಮಯ ಮೀಸಲಿಟ್ಟರೆ ಮುಂದೆ ಪರಿತಪಿಸಬೇಕಾಗುತ್ತದೆ. ಹೇಳಿಕೆ ಮಾತುಗಳನ್ನು ಕೇಳದಿರಿ. ನಾನು ಮಾಡಿದ್ದೇ ಸರಿ ಎಂಬ ಧೋರಣೆಯಿದ್ದಲ್ಲಿ ನಷ್ಟವನ್ನು ಅನುಭವಿಸುತ್ತೀರಿ.
ವಸ್ತ್ರಾಭರಣ ಖರೀದಿಗಾಗಿ ಹಣ ಖರ್ಚು ಮಾಡುವ ಯೋಗ ಇದೆ. ಅದಕ್ಕಾಗಿ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಮಕ್ಕಳ ಏಳ್ಗೆಗಾಗಿ ಆಸ್ತಿ ಮಾರಾಟ ಮಾಡುವ ಆಲೋಚನೆ ಮಾಡುತ್ತೀರಿ. ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದ್ದ ಹಣವನ್ನು ಅರ್ಧದಲ್ಲೇ ತೆಗೆಯುವ ಸ್ಥಿತಿ ಎದುರಾಗಬಹುದು.
ಹೊಸ ವ್ಯಾಪಾರ- ಉದ್ಯಮ ಆರಂಭಿಸುವ ಬಗ್ಗೆ ಆಲೋಚನೆ ಬರುತ್ತದೆ. ಪಾರ್ಟನರ್ ಷಿಪ್ ವ್ಯವಹಾರ ನಡೆಸುತ್ತಿರುವವರಿಗೆ ವಿಸ್ತರಣೆ ಮಾಡುವ ಕುರಿತು ಸಾಧ್ಯತೆಗಳು ಗೋಚರಿಸುತ್ತವೆ. ಕಿರು ಪ್ರವಾಸವಾದರೂ ಮಾಡುವ ಯೋಗ ಇದ್ದು, ಪ್ರೀತಿಪಾತ್ರರ ಜತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ.
Tags:
ದಿನ ಭವಿಷ್ಯ












