ಭೂಮಿ ವ್ಯಾಜ್ಯಗಳಿದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಹಣಕಾಸಿನ ವಿಚಾರದಲ್ಲಿ ಯಾವುದೇ ಮಾತು ನೀಡಬೇಡಿ. ಮಕ್ಕಳ ಉದ್ಯೋಗ, ಮದುವೆಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆಯಿದೆ. ಸ್ವಾರ್ಥಿಗಳ ಲೆಕ್ಕಾಚಾರವನ್ನು ತಿಳಿಯಲು ಸಾಧ್ಯವಾಗದೆ ಸ್ವಲ್ಪ ಹಣವನ್ನು ಕಳೆದುಕೊಳ್ಳಲಿದ್ದೀರಿ.
ತುರ್ತು ಖರ್ಚುಗಳನ್ನು ನಿಭಾಯಿಸುವುದು ಹೇಗೆ ಎಂಬುದೇ ಪ್ರಶ್ನೆಯಾಗಿ ಕಾಡುತ್ತದೆ. ಎಂದಿಗೋ ನೀವು ಆಡಿದ್ದ ಮಾತನ್ನು ಕೆಲವರು ಹಗೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ವಾಹನ ದುರಸ್ತಿ, ಮನೆ ನವೀಕರಣಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಪೋಷಕರ ಆರೋಗ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ.
ಭವಿಷ್ಯದ ಯೋಜನೆಯೊಂದಕ್ಕೆ ಹಣಕಾಸು ಹೊಂದಿಸಲು ಬ್ಯಾಂಕ್- ಹಣಕಾಸು ಸಂಸ್ಥೆಗಳಲ್ಲಿ ಪ್ರಯತ್ನಿಸಲಿದ್ದೀರಿ. ಕಾಲು- ಬೆನ್ನು ನೋವು ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ನಿಮ್ಮ ಬಳಿ ಇರುವ ಮೂಲ ಬಂಡವಾಳವನ್ನು ರಿಸ್ಕ್ ಇರುವ ವ್ಯವಹಾರದಲ್ಲಿ ತೊಡಗಿಸಬೇಡಿ.
ಈ ದಿನ ನಿರುತ್ಸಾಹ ನಿಮ್ಮನ್ನು ಕಾಡುತ್ತದೆ. ಎಷ್ಟು ಕೆಲಸ ಮಾಡಿದರೂ ಇಷ್ಟೇ ಎಂಬ ಮನೋಭಾವ ಕಾಣಿಸಿಕೊಳ್ಳುತ್ತದೆ. ಮುಖ್ಯವಾದ ಕೆಲಸವೊಂದನ್ನು ಕಣ್ತಪ್ಪಿನಿಂದಾಗಿ ಮಾಡದೆ ಬೈಗುಳ ಕೇಳಿಸಿಕೊಳ್ಳಬೇಕಾಗುತ್ತದೆ. ಊಟ- ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಮಾಡಿ, ಇಲ್ಲದಿದ್ದಲ್ಲಿ ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ನಿರೀಕ್ಷಿತ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ ಇದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ವಿಸ್ತರಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ದೊರೆಯುತ್ತದೆ. ನೇರವಂತಿಕೆ ಕಾರಣಕ್ಕೆ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಸಾರ್ವಜನಿಕ ಸಮಾರಂಭ, ಸಮಾವೇಶ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಲಿದ್ದೀರಿ.
ದೈನಂದಿನ ಕೆಲಸ- ಕಾರ್ಯಗಳಲ್ಲಿ ನಾನಾ ಬಗೆಯ ಅಡೆತಡೆ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಹೊಸಬರ ಜತೆಗೆ ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆ ಮುಖ್ಯ. ಬೇರೆಯವರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಬೇಡಿ.ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ಪೋಷಕರಿಗೆ ಅಥವಾ ತಂದೆ- ತಾಯಿ ಸಮಾನರಿಗೆ ತೀರ್ಥಕ್ಷೇತ್ರಗಳ ಪ್ರವಾಸ ಮಾಡಿಸುವ ಯೋಗ ಇದೆ. ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಕೆಲಸದ ಒತ್ತಡದ ಕಾರಣಕ್ಕೆ ದೇಹಾಯಾಸ ಆಗಲಿದ್ದು, ವಿಶ್ರಾಂತಿಯ ಅಗತ್ಯ ಕಂಡುಬರುತ್ತದೆ. ಬಂಧು- ಮಿತ್ರರನ್ನು ಭೇಟಿ ಆಗಲಿದ್ದೀರಿ.
ಸಹೋದ್ಯೋಗಿಗಳು ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎಂದು ಸಿಟ್ಟನ್ನು ಹೊರಹಾಕುತ್ತೀರಿ. ಹೊಟ್ಟೆಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಔತಣಕೂಟಕ್ಕೆ ಆಹ್ವಾನ ಬರಲಿದ್ದು, ಸಂಬಂಧಿಗಳ ಮನೆಯಲ್ಲಿ ದೇವತಾರಾಧನೆಗೆ ಆಹ್ವಾನ ಬರಲಿದೆ.
ಮಕ್ಕಳ ಪ್ರಗತಿಯಿಂದ ಹೆಮ್ಮೆ ಪಡುತ್ತೀರಿ. ಉನ್ನತ ಶಿಕ್ಷಣ, ಮದುವೆ ಇತ್ಯಾದಿ ಉದ್ದೇಶಕ್ಕೆ ಹಣ ಉಳಿತಾಯ ಮಾಡುವ ಯೋಜನೆ ರೂಪಿಸಲಿದ್ದೀರಿ. ಸೋದರ- ಸೋದರಿಯರ ಜತೆಗೆ ಹಣಕಾಸಿನ ವಿಚಾರವಾಗಿ ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಲಿದೆ. ಮಾತು ಬೆಳೆಸದಿದ್ದಲ್ಲಿ ವಿಕೋಪಕ್ಕೆ ಹೋಗದಂತೆ ತಡೆಯಬಹುದು.
ಆತುರದಲ್ಲಿ ಯಾವುದೇ ಹಣಕಾಸಿನ ತೀರ್ಮಾನ ಮಾಡಬೇಡಿ. ಉದ್ಯೋಗದ ಹೊರತಾಗಿ ಆದಾಯ ಬರುವಂಥ ಯೋಜನೆ ರೂಪಿಸುವುದಕ್ಕಾಗಿ ನಿಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸಬೇಡಿ. ಇದರಿಂದ ಇಷ್ಟು ಸಮಯ ಕಾಪಾಡಿಕೊಂಡು ಬಂಥಂಥ ವಿಶ್ವಾಸಾರ್ಹತೆಗೆ ಧಕ್ಕೆ ಆಗುತ್ತದೆ, ಎಚ್ಚರ.
ಹಿರಿಯರಿಗೆ ಮಂಡಿ ನೋವು, ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ವ್ಯಾಪಾರ- ಉದ್ಯಮದಲ್ಲಿ ಪ್ರಗತಿ ಇದೆ. ಸ್ವಂತ ನಿರ್ಧಾರದಿಂದ ಅಲ್ಪ ಪ್ರಮಾಣದಲ್ಲಾದರೂ ಲಾಭ ಪಡೆಯಲಿದ್ದೀರಿ. ಮನೆ ಖರ್ಚಿನ ಬಗ್ಗೆ ನಿಗಾ ಇರಲಿ. ಅಪರಿಚಿತರ ಜತೆಗೆ ಹಣಕಾಸಿನ ವ್ಯವಹಾರ ಮಾಡಬೇಡಿ.
ಪರಿಸರ ಕಾಳಜಿಯಿಂದ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದೀರಿ. ಕಲಾವಿದರಿಗೆ, ರಾಜಕಾರಣಿಗಳಿಗೆ ಸಾರ್ವಜನಿಕವಾಗಿ ಸನ್ಮಾನ, ಗೌರವ ದೊರೆಯಲಿದೆ. ವಾಹನ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ದೊರೆಯಲಿದೆ.
Tags:
ದಿನ ಭವಿಷ್ಯ