ಶುಭ ಕಾರ್ಯಗಳನ್ನು ನಡೆಸುವ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಇದಕ್ಕಾಗಿ ಹೆಚ್ಚಿನ ಓಡಾಟ ನಿಮ್ಮದಾಗಿರುತ್ತದೆ. ಸಮಾಜದಲ್ಲಿ ಮನ್ನಣೆ, ಗೌರವ ದೊರೆಯಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ಬರಬಹುದು. ಸಣ್ಣ ಪ್ರಮಾಣದಲ್ಲಾದರೂ ಕೈ ಸಾಲ ಮಾಡಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿರುವವರು ಖರ್ಚಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮಗ ಅಥವಾ ಮಗಳ ಆರೋಗ್ಯ ಪರೀಕ್ಷೆಗಾಗಿ ಖರ್ಚಾಗಲಿದೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದವರಿಗೆ ಒತ್ತಡ ಇರಲಿದೆ. ಆಹಾರ- ನೀರು ಸೇವನೆ ವಿಚಾರದಲ್ಲಿ ಗಮನ ಇರಲಿ.
ಇತರರ ಸಣ್ಣತನದಿಂದ ಬಹಳ ಬೇಸರ ಉಂಟಾಗಲಿದೆ. ಈ ಹಿಂದೆ ನೀವು ಮಾಡಿದ್ದ ಸಹಾಯವನ್ನು ಮರೆತು, ಕೆಲವರು ದ್ರೋಹ ಎಸಗಬಹುದು. ಆದರೆ ಇದು ತಾತ್ಕಾಲಿಕ ಅಷ್ಟೇ. ದೀರ್ಘ ಕಾಲದ ಸವಾಲುಗಳನ್ನು ಎದುರಿಸಲು ವಿವಿಧ ದಾರಿಗಳು ಗೋಚರವಾಗುತ್ತವೆ. ಮನರಂಜನೆಗಾಗಿ ಖರ್ಚು ಮಾಡಲಿದ್ದೀರಿ.
ಸ್ವಾಭಿಮಾನವನ್ನು ಪ್ರಶ್ನಿಸುವ ಮೂಲಕ ನಿಮ್ಮನ್ನು ಕೆರಳಿಸುವ ಪ್ರಯತ್ನ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚು ಮಾತು ಬೆಳೆಸಬೇಡಿ. ಹಣಕಾಸಿನ ವಿಚಾರದಲ್ಲಿ ಈ ಹಿಂದೆ ಯಾವಾಗಲೋ ನೀಡಿದ ಮಾತನ್ನು ಉಳಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಾಲದ ಸುಳಿಯಲ್ಲಿ ಸಿಲುಕಬಹುದು, ಎಚ್ಚರ.
ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರು ಹೆಚ್ಚಿನ ರಿಸ್ಕ್ ಇರುವ ವಹಿವಾಟನ್ನು ಮಾಡಬೇಡಿ. ಯಾರದೋ ಸಲಹೆ ಕೇಳಿಕೊಂಡು ದೊಡ್ಡ ಮಟ್ಟದ ಅಪಾಯವನ್ನು ಮೈ ಮೇಲೆ ಎಳೆದುಕೊಂಡರೆ ನಷ್ಟದ ಪಾಲಾಗುತ್ತೀರಿ. ಸಾಧ್ಯವಾದಲ್ಲಿ ಬಡವರಿಗೆ ಒಬ್ಬರಿಗೆ ಊಟ ಕೊಡಿಸಿ.
ದೇವತಾರಾಧನೆಗಾಗಿ ಹಣ ಖರ್ಚು ಮಾಡಲಿದ್ದೀರಿ. ದಾನ- ಧರ್ಮಾದಿಗಳಿಗಾಗಿ ಒಂದಿಷ್ಟು ಹಣವನ್ನು ಮೀಸಲಿಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಸಂಬಂಧಿಗಳ ಜತೆಗೆ ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಡುವ ಸಂಭವ ಇದೆ. ಆದ್ದರಿಂದ ಯಾವುದೇ ಮಾತನಾಡುವ ಮುನ್ನ ಪರಿಣಾಮದ ಬಗ್ಗೆಯೂ ಆಲೋಚಿಸಿ.ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.
ನಿಮ್ಮ ಪಾಲಿನ ಕೆಲಸವನ್ನು ಮತ್ತೊಬ್ಬರಿಗೆ ವಹಿಸಿ, ಲಾಭವನ್ನು ಹಂಚಿಕೊಳ್ಳುವ ಆಲೋಚನೆ ಮೂಡಲಿದೆ. ಇದಕ್ಕಾಗಿ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸಲಿದ್ದಾರೆ. ದೂರದ ಊರುಗಳಿಂದ ಶುಭ ಸುದ್ದಿ ಕೇಳುವ ಯೋಗ ಇದೆ. ವಸ್ತ್ರಾಭರಣ ಖರೀದಿಗಾಗಿ ಆಪ್ತರ ಬಳಿ ಸಾಲ ಮಾಡಬಹುದು.
ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಯೋಜನೆ ರೂಪಿಸುತ್ತೀರಿ. ಪ್ರೇಮಿಗಳಿಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ವ್ಯಾಪಾರಿಗಳು, ಉದ್ಯಮಿಗಳಿಗೆ ಗೌರವ- ಸನ್ಮಾನ ದೊರೆಯಬಹುದು. ನಿಮ್ಮ ಬಗ್ಗೆ ಇತರರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.
ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸಲು ಸಂಗಾತಿ ಜತೆಗೆ ಚರ್ಚೆ ನಡೆಸುತ್ತೀರಿ. ಹಳೆಯ ಗೆಳೆಯ ಅಥವಾ ಗೆಳತಿಯನ್ನು ಭೇಟಿ ಆಗುವ ಯೋಗ ಇದೆ. ನಿಮ್ಮಿಂದ ನೆರವನ್ನು ಕೇಳಿಕೊಂಡು ನೆಂಟರು ಬರಬಹುದು. ಹೌದು ಅಥವಾ ಇಲ್ಲ ಎಂದು ಹೇಳಲು ಸಾಧ್ಯವಾಗದ ಗೊಂದಲಕ್ಕೆ ಬೀಳುತ್ತೀರಿ.
ಆಲಸ್ಯದಿಂದ ಉತ್ತಮ ಅವಕಾಶವೊಂದನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮನೆಯ ಬಳಿಯ ಸ್ಥಳವೊಂದಕ್ಕೆ ಹೋಗಬೇಕಾದರೂ ಸ್ವಲ್ಪ ಮುಂಚಿತವಾಗಿಯೇ ಅಲ್ಲಿ ಇರುವಂತೆ ಹೊರಡಿ. ಗುರು- ಹಿರಿಯರ ಸಲಹೆಯನ್ನು ಪಾಲಿಸಿ. ಸುಲಭವಾಗಿ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಸಾಲ ಮಾಡಬೇಡಿ.
ಉದ್ಯೋಗಸ್ಥ ಮಹಿಳೆಯರಿಗೆ ವಿಪರೀತ ಆಯಾಸದ ದಿನ ಇದು. ಇನ್ನು ಬೆಂಕಿಯ ಮುಂದೆ ಕೆಲಸ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಮನೆಯಿಂದ ಹೊರಡುವಾಗ ಸರಿಯಾಗಿ ಬೀಗ ಹಾಕಿದ್ದೀರೋ ಇಲ್ಲವೋ ಎಂಬುದನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ಮಹತ್ವದ ದಾಖಲೆಗಳ ಬಗ್ಗೆ ನಿಗಾ ಇರಲಿ.
ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಇರಲಿ. ಗೃಹಾಲಂಕಾರ ವಸ್ತುಗಳು, ಟೀವಿ, ಗ್ಯಾಜೆಟ್, ಲ್ಯಾಪ್ ಟಾಪ್ ನಂಥ ಖರೀದಿ ಮಾಡಬೇಕು ಎಂದಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ ಮಾಡಿ, ಆ ನಂತರ ಮುಂದುವರಿಯಿರಿ. ನಿಮಗಿಂತ ಚಿಕ್ಕ ವಯಸ್ಸಿನವರ ಎದುರು ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇರಲಿ.
Tags:
ದಿನ ಭವಿಷ್ಯ











