ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಕರಾರುಗಳನ್ನು ಹಿರಿಯರ ಮೂಲಕ ಸಂಧಾನ ಮಾಡಿಸಿ ಬಗೆಹರಿಸಿಕೊಳ್ಳಿ. ಕೋರ್ಟು ಕಚೇರಿ ಎಂದು ಹೋದರೆ ನಿಮಗೆ ದಕ್ಕಬೇಕಾದ ಆಸ್ತಿಯು ದಕ್ಕದೆ ಹೋಗಬಹುದು.
ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಕೆಲಸ ಕಾರ್ಯಗಳಲ್ಲಿ ಅನಗತ್ಯ ಸಂಶಯವನ್ನು ಹುಟ್ಟುಹಾಕುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಕಾರಣರಾಗುವಿರಿ.
ಮಿಥುನಧೂರ್ತರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದಲೇ ಎದುರಿಸಬೇಕು. ಕೆಲಸ ಮಾಡುವ ಕಚೇರಿಯಲ್ಲಿ ವಿನಾಕಾರಣ ನಿಮಗೆ ಕಿರುಕುಳ ಎದುರಾಗುವುದು. ಅದಕ್ಕೆ ಅಂಜದೆ ಅವರದೇ ರೀತಿಯಲ್ಲಿ ಉತ್ತರ ನೀಡಿ.
ಮನೆಯ ಸಮಸ್ಯೆಗಳನ್ನು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಮನೆಯ ಒಳಗಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರಗಳು ಉಪಯೋಗಕ್ಕೆ ಬರುವುದು ಮತ್ತು ಎಲ್ಲರೂ ಒಪ್ಪುವರು.
ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಗೆಳೆಯರಿಗೆ ಫೋನ್ ಮಾಡಿ ಮಾತುಕತೆ ನಡೆಸಿ.
ಇವತ್ತಿನ ಕೆಲಸ ಕಾರ್ಯಗಳಲ್ಲಿ ಗೆಲುವು ನಿಮ್ಮದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ ಪ್ರೀತಿಸುವಿರಿ.
ಬಹುದಿನದ ನಿರೀಕ್ಷೆ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು.
ನಿರಾಶೆಯ ಅಲೆಗಳು ನಿಮ್ಮೆದುರು ಹರಿದು ಬರುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಇದೆ. ಆದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.
ಹಲವು ತಾಪತ್ರಯಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ.
ಯಾವುದು ಎದುರಿಗಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದು ತರವಲ್ಲ. ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು.
ಸಹನೆ ಮತ್ತು ಸಮಯಾವಧಾನಗಳಿಂದ ಕೆಲ ಸ್ಥಳಗಳಲ್ಲಿ ವಿಶೇಷ ಜನಪ್ರಿಯತೆಯನ್ನು ಗಳಿಸುವಿರಿ. ಹಾಗಾಗಿ ಬರಬೇಕಾಗಿದ್ದ ಹಣವು ಶೀಘ್ರದಲ್ಲಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿ.
ವೃಥಾ ಸುಮ್ಮನೆ ಖರ್ಚಿನ ದಾರಿಗಳನ್ನು ಹುಡುಕಲು ಹೋಗದಿರಿ. ಇದರಿಂದ ನಿಮಗೆ ತೊಂದರೆ ಎದುರಾಗುವುದು. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಿ. ಆಗ ನಿಮಗೆ ಭಗವಂತನು ದುಪ್ಪಟ್ಟು ಹಣವನ್ನು ಕೊಡುವನು.
Tags:
ದಿನ ಭವಿಷ್ಯ











