ಇಂದಿನ ಭವಿಷ್ಯ ಮಾರ್ಚ್ 6th 2020


Today astrology in kannada today horoscope in kannada


ನಿಮ್ಮ ಪೈಕಿ ಕೆಲವರಿಗೆ ಸ್ವಂತ ಮನೆ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸುವಂತೆ ಸಲಹೆ ಕೆಳಿಬರುತ್ತದೆ. ಸ್ನೇಹಿತರು, ಸಂಬಂಧಿಗಳ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೀರಿ. ಗ್ರಂಥಾಲಯಗಳಲ್ಲಿ ಕೆಲಸ ಮಾಡುವವರಿಗೆ ಮಹತ್ವದ ಜವಾಬ್ದಾರಿ ಹೆಗಲೇರುತ್ತದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಉತ್ತಮ ದಿನ.




Today astrology in kannada today horoscope in kannada

ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಬಡ್ತಿ, ವೇತನದ ಹೆಚ್ಚಳದ ಜತೆಗೆ ಹೆಚ್ಚಿನ ಜವಾಬ್ದಾರಿ ಅಥವಾ ಪದೋನ್ನತಿ ಆಗುವ ಸಮಯ ಇದು. ದೀರ್ಘಾವಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹೊರಟವರಿಗೆ ನಾನಾ ರೀತಿಯಲ್ಲಿ ಸವಾಲುಗಳು ಎದುರಾಗುತ್ತವೆ. ಮಾಮೂಲಿಗಿಂತ ಈ ದಿನ ಹೆಚ್ಚು ಚಟುವಟಿಕೆಯಿಂದ ಇರುತ್ತೀರಿ.




Today astrology in kannada today horoscope in kannada

ನಿಮ್ಮ ವಯಸ್ಸಿಗೆ ಮೀರಿದ ಆಲೋಚನೆಯ ಮೂಲಕ ಇತರರನ್ನು ಆಕರ್ಷಿಸುತ್ತೀರಿ. ಅನಿಸಿದ್ದನ್ನು ನೇರವಾಗಿ ಹೇಳುವ ನಿಮ್ಮ ಸ್ವಭಾವ ಕೆಲವರಿಗೆ ಇರುಸು ಮುರುಸು ಉಂಟು ಮಾಡಬಹುದು. ಆ ಕಾರಣಕ್ಕೆ ಇತರರಿಗಿಂತ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತೀರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.




Today astrology in kannada today horoscope in kannada

ಈ ದಿನ ಯಾರಿಂದಲಾದರೂ ಮಾನಸಿಕ ಕಿರುಕುಳ ಅನುಭವಿಸುವ ಯೋಗ ನಿಮ್ಮದು. ವಿನಾಕಾರಣವಾಗಿ ಆತಂಕ, ಗಾಬರಿಗೊಳಗಾಗಲಿದ್ದೀರಿ. ಅನವಶ್ಯಕವಾಗಿ ಕೂಗಾಟ- ಚೀರಾಟ ಕೇಳಬೇಕಾದೀತು. ಸ್ವತಂತ್ರವಾಗಿ ಆಲೋಚನೆ ಮಾಡಲು ಸಹ ಸಮಯ ಸಿಗದಂತೆ ನಿಮ್ಮ ಮೇಲೆ ಒತ್ತಡ ಹಾಕಲಾಗುತ್ತದೆ.ಸಾವಯವ ಕೃಷಿ ಮಾಡುವವರಿಗೆ ಸಾಧನೆಗೆ ಸಮ್ಮಾನ- ಮನ್ನಣೆ ಸಿಗುವ ದಿನ ಇದು. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಲಾಭದಾಯಕವಾಗಿ ಇರುತ್ತದೆ. ನೀವಾಗಿಯೇ ಕೇಳದಿದ್ದರೂ ಅಗತ್ಯ ನೆರವು ದೊರೆಯುತ್ತದೆ. ಸಂಗಾತಿ ಜತೆಗೆ ಉತ್ತಮವಾದ ಸಮಯ ಕಳೆಯುವ ಯೋಗ ಇದೆ.






Today astrology in kannada today horoscope in kannada

ನಿಮ್ಮ ಮರೆವಿನ ಕಾರಣಕ್ಕೆ ನಷ್ಟ ಅನುಭವಿಸಲಿದ್ದೀರಿ. ಜತೆಗೆ ಆರೋಗ್ಯದಲ್ಲೂ ವ್ಯತ್ಯಾಸ ಆಗಬಹುದು. ಆದ್ದರಿಂದ ಯಾವುದೇ ಮುಖ್ಯ ಸಂಗತಿಗಳನ್ನು ಮರೆತಿಲ್ಲವೇ ಎಂಬುದನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ಅಗತ್ಯ ಕಂಡುಬಂದಲ್ಲಿ ನಿಮಗಿಂತ ಹಿರಿಯರ, ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳಿ.





Today astrology in kannada today horoscope in kannada

ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮೇಲೊಬ್ಬರು ನಿಗಾ ಮಾಡುವ ಸಲುವಾಗಿ ಬಂದು ಕೂತಂತೆ ಭಾಸವಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಒಪ್ಪಿಸಿ, ಅದನ್ನು ಮಾಡುತ್ತೀರೋ ಇಲ್ಲವೋ ಎಂದು ಪರೀಕ್ಷೆ ಮಾಡುತ್ತಿರುವಂತೆಯೂ ಅನಿಸುತ್ತದೆ. ಯಾವುದಕ್ಕೂ ತಾಳ್ಮೆಯಿಂದ ಇರಿ.ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.






Today astrology in kannada today horoscope in kannada

ಆಹಾರ- ನೀರಿನ ಸೇವನೆ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಇತರರನ್ನು ನಂಬಿಕೊಂಡು ಯಾವುದೇ ಕೆಲಸ ಮಾಡುವುದು ಬೇಡ. ಏಕೆಂದರೆ ಅದರಿಂದ ಹಣಕಾಸಿನ ನಷ್ಟ ಅನುಭವಿಸಬೇಕಾಗುತ್ತದೆ. ಹಳೆಯ ದ್ವೇಷ ಸಾಧನೆ ಕೂಡ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಹಳೆಯದನ್ನು ಮರೆತು, ಮುಂದುವರಿಯುವುದು ಉತ್ತಮ.




Today astrology in kannada today horoscope in kannada

ಹೊಸ ಐಡಿಯಾಗಳನ್ನು ನೀಡುವ ಮೂಲಕ ಮೇಲಧಿಕಾರಿಗಳ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ನಿಮಗೆ ದೊರೆತಿರುವ ಮಾನ್ಯತೆಯನ್ನು ಗಮನಿಸಿ, ಇತರರು ಹೊಟ್ಟೆಕಿಚ್ಚು ಪಡುವಂತೆ ಆಗುವಂತೆ. ಶುಭ ಕಾರ್ಯ, ದೇವತಾರಾಧನೆಗಳ ಸಲುವಾಗಿ ಬಂಧುಗಳ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ.






Today astrology in kannada today horoscope in kannada

ಈ ದಿನ ನಿದ್ದೆ, ಆಲಸ್ಯ ನಿಮ್ಮನ್ನು ಬಹಳ ಕಾಡುತ್ತದೆ. ದೈಹಿಕ ಶ್ರಮ ಜಾಸ್ತಿಯಾಗಲಿದೆ. ಮನರಂಜನೆ ಸಲುವಾಗಿ ಖರ್ಚು ಮಾಡಲಿದ್ದೀರಿ. ಸಂಗಾತಿ, ಮಕ್ಕಳ ಸಲುವಾಗಿ ಮುಖ್ಯ ತೀರ್ಮಾನ ಅಥವಾ ತ್ಯಾಗ ಮಾಡಬೇಕಾಗುತ್ತದೆ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು.







Today astrology in kannada today horoscope in kannada

ಬೆಲೆಬಾಳುವ ವಸ್ತುಗಳು, ಮುಖ್ಯ ದಾಖಲೆಗಳ ಬಗ್ಗೆ ಗಮನ ಇರಲಿ. ಬೇರೆಯವರು ವಹಿಸಿದ ಜವಾಬ್ದಾರಿಯನ್ನಾದರೂ ಸರಿ, ಗಮನ ಇಟ್ಟು ನಿರ್ವಹಿಸಿ. ಯಾರದೋ ಮೇಲಿನ ಸಿಟ್ಟನ್ನು ಮತ್ಯಾರ ಮೇಲೋ ತೋರಿಸಿ, ಅಪಹಾಸ್ಯಕ್ಕೆ ಗುರಿ ಆಗುತ್ತೀರಿ. ನಾನು ಹೇಳಿದ್ದೇ ನಡೆಯಬೇಕು ಎಂಬ ಹಠ ಒಳ್ಳೆಯದಲ್ಲ.




Today astrology in kannada today horoscope in kannada

ಒಂಟಿತನ ನಿಮ್ಮನ್ನು ಕಾಡುತ್ತದೆ. ಯಾರಲ್ಲಿ ಹೇಳಿಕೊಳ್ಳುವುದಕ್ಕೂ ನಂಬಿಕೆ ಮೂಡುವುದಿಲ್ಲ. ನಿಮ್ಮ್ ಪರಿಶ್ರಮವೆಲ್ಲ ವ್ಯರ್ಥವಾಯಿತೇನೋ ಎಂಬ ಬೇಸರ ಮೂಡುತ್ತದೆ. ಅಧ್ಯಾತ್ಮ ಚಿಂತನೆಯತ್ತ ಮನಸ್ಸು ಹೊರಳುತ್ತದೆ. ಆದಷ್ಟೂ ಈ ದಿನ ಮೌನವಾಗಿರುವುದಕ್ಕೆ ಪ್ರಯತ್ನ ಮಾಡಿ.






Today astrology in kannada today horoscope in kannada

ಒಂದು ಬದಲಾವಣೆಯ ನಿರೀಕ್ಷೆಯಲ್ಲಿ ಇರುವವರಿಗೆ ಆ ಬಗ್ಗೆ ಸುದ್ದಿ ಅಥವಾ ಸುಳಿವು ದೊರೆಯುತ್ತದೆ. ಮುಖ್ಯ ವ್ಯಕ್ತಿಯೊಬ್ಬರ ಪರಿಚಯದ ಮೂಲಕ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರ ಹೇಳುವಾಗ ಭಾವನಾತ್ಮಕವಾಗಿ ಚಿಂತಿಸಬೇಡಿ, ವಾಸ್ತವವಾಗಿ ಆಲೋಚಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement