ಇಂದಿನ ಭವಿಷ್ಯ ಮಾರ್ಚ್ 04, 2020

Today astrology in kannada today horoscope in kannada

ಸಾಮಾಜಿಕ ಜೀವನದ ಹಿನ್ನೆಲೆಯಲ್ಲಿ ನಿಮಗೆ ಗೌರವ ಆದರಗಳು ದೊರೆಯುವುದು. ಈ ವಿಚಾರವು ನಿಮ್ಮ ವಿರೋಧಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಜಯವಿರುವವರೆಗೂ ಭಯವಿಲ್ಲ. ಹಾಗಾಗಿ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

Today astrology in kannada today horoscope in kannada

ಧರ್ಮ, ನ್ಯಾಯ ಹಾಗೂ ಸತ್ಯಗಳನ್ನು ರಕ್ಷಿಸುವುದೇ ನಿಮ್ಮ ಮೊದಲನೆಯ ಆದ್ಯತೆ ಆಗಿರುವುದು. ಹಾಗಿದ್ದರೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವ ಜನರು ನಿಮ್ಮನ್ನು ತಪ್ಪಾಗಿ ಅಥೈರ್‍ಸಿಕೊಂಡು ಕೆಲಸದಿಂದ ದೂರ ಸರಿಯುವರು. ಗುರು ಮಂತ್ರ ಪಠಿಸಿ.

Today astrology in kannada today horoscope in kannada

ನಿಮ್ಮ ಸೇವೆಯ ರೀತಿ ನೀತಿಗಳಿಂದ ಪ್ರಭಾವಿತರಾದ ಜನರು ನಿಮ್ಮನ್ನೆ ಮುಂದಿನ ಮುಖಂಡನಾಗಬೇಕೆಂದು ಪ್ರಾರ್ಥಿಸುವರು. ಇದು ಶುಭ ಸಮಾಚಾರವೇ ಆದರೂ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಅಡ್ಡಿವುಂಟಾಗುವುದು.

Today astrology in kannada today horoscope in kannada

ಕೆಲಸದ ಸ್ಥಳದಲ್ಲಿ ನಿಮ್ಮ ಹೆಗಲಿಗೆ ಹೊಸ ರೀತಿಯ ಜವಾಬ್ದಾರಿಗಳು ಏರಲಿವೆ. ಅಂತೆಯೇ ಸಾಕಷ್ಟು ಒತ್ತಡವೂ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ನಿಷ್ಠುರತೆಯನ್ನು ತೋರದಿದ್ದಲ್ಲಿ ಮಹತ್ತರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ.

Today astrology in kannada today horoscope in kannada

ವ್ಯರ್ಥವಾದ ಪ್ರಯತ್ನಗಳಿಂದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ತರವಲ್ಲ. ಹಣವನ್ನು ಆದಷ್ಟು ಕಡಿಮೆ ಖರ್ಚು ಮಾಡುವುದು ಒಳ್ಳೆಯದು.

Today astrology in kannada today horoscope in kannada

ನಿಮ್ಮ ಕೈ ಕೆಳಗಿನ ಕೆಲಸಗಾರರನ್ನು ಸಂತೋಷಪಡಿಸಿ. ಆರ್ಥಿಕ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಗುರುಹಿರಿಯರ ಆಶೀರ್ವಾದ ಪಡೆಯಿರಿ. ಕುಲದೇವತಾ ಪ್ರಾರ್ಥನೆ ಮಾಡಿ.

Today astrology in kannada today horoscope in kannada

ನೀವು ಸರ್ಕಾರಿ ಕೆಲಸಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು. ಅವರಿವರ ಮಾತುಗಳಿಗೆ ಕಿವಿಗೊಡದಿರಿ.

Today astrology in kannada today horoscope in kannada

ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು.

Today astrology in kannada today horoscope in kannada

ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಏಕಾಂತದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.

Today astrology in kannada today horoscope in kannada

ನಿಮ್ಮ ಮಾತಿಗೂ ಕೃತಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿ.

Today astrology in kannada today horoscope in kannada

ಬೆನ್ನು ನೋವು ಅಥವಾ ಮಂಡಿನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

Today astrology in kannada today horoscope in kannada

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಆಸ್ತಿ. ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ನಿಮಗೆ ಮುದವನ್ನುಂಟು ಮಾಡುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement