ಕುಮಟಾ: ಟೆಂಪೊವೊಂದು ಪಲ್ಟಿಯಾದ ಘಟನೆ ತಾಲೂಕಿನ ಹಂದಿಗೋಣ ಸರಕಾರಿ ಶಾಲಾ ಸಮೀಪ ಮಂಗಳವಾರ ಮದ್ಯಾಹ್ನ ನಡೆದಿದೆ.
ಹೊನ್ನಾವರದಿಂದ ಕುಮಟಾ ಮಾರ್ಗವಾಗಿ ಬರುತ್ತಿದ್ದ ವಾಹನ ಹಂದಿಗೋಣ ಶಾಲಾ ಸಮೀಪ ಪಲ್ಟಿಯಾಗಿದ್ದು, ಪ್ರಯಾಣಿಕರಿಗೆ ತಲೆ ಹಾಗೂ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ವಾಹನದಲ್ಲಿದ್ದ ಪ್ರಯಾಣಿಕರಲ್ಲಿ ,ಗಾಯಾಳುಗಳಾದ ಪ್ರಶಾಂತ ನಾಯಕ ಕೊಡ್ಕಣಿ ಇವರನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಮಣಿಪಾಲ್ ಹಾಗೂ ಲೋಕರಾಜ್ ಜೈನ್ ಗುಂಡಬಾಳ,ರೇವತಿ ಭಂಡಾರಿ ಹೊಳೆಗದ್ದೆ ಇವರನ್ನು ಹೊನ್ನಾವರ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ಉಳಿದೆಲ್ಲ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸ್ಥಳಕ್ಕೆ ಕುಮಟಾ ಸಿಪಿಐ ಪರಮೇಶ್ವರ ಗುನಗ ಹಾಗೂ ಕ್ರೈಂ ಪಿಎಸ್ ಐ ಸುಧಾ ಅಘನಾಶಿನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.