ಇಂದಿನ ಭವಿಷ್ಯ ಫೆಬ್ರವರಿ 29, 2020

Today astrology in kannada today horoscope in kannada

ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು.

Today astrology in kannada today horoscope in kannada

ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು.

Today astrology in kannada today horoscope in kannada

ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Today astrology in kannada today horoscope in kannada

ಕೆಲಸ ಸಾಧನೆಗಾಗಿ ಹಲವು ಪ್ರಮುಖರನ್ನು ಭೇಟಿ ಮಾಡಬೇಕಾಗುವುದು. ಮನೆಯಿಂದ ಹೊರಗಡೆ ಹೊರಡುವ ಮುನ್ನ ಮನೆಯಲ್ಲಿನ ಹಿರಿಯರಿಗೆ ನಮಸ್ಕರಿಸಿ ಹೋದಲ್ಲಿ ಕೆಲಸ ಸಿದ್ಧಿಸುವುದು.

Today astrology in kannada today horoscope in kannada

ಅತ್ಯಂತ ಚುರುಕುತನದಿಂದ ಇದ್ದ ನೀವು ಆಲಸ್ಯತನ ತೋರುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಮನೋವೇಗವುಳ್ಳ ಆಂಜನೇಯನನ್ನು ಸ್ಮರಿಸಿ ಆಲಸ್ಯತನದಿಂದ ಹೊರಬನ್ನಿ.

Today astrology in kannada today horoscope in kannada

ಟೀಕಿಸುವಂತಹ ಜನರ ಕುರಿತು ಆತಂಕ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತಲ ಜನರೇ ನಿಮ್ಮನ್ನು ಅಡ್ಡಹಾದಿಗೆ ಎಳೆಯುತ್ತಿರುವರು. ಹಾಗಾಗಿ ನಿಮ್ಮ ಬಳಿ ಬರುವ ಜನರ ಬಗ್ಗೆ ಎಚ್ಚರದಿಂದಿರಿ.

Today astrology in kannada today horoscope in kannada

ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷ ಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು.

Today astrology in kannada today horoscope in kannada

ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

Today astrology in kannada today horoscope in kannada

ಪಾರ್ಟನರ್‌ ಶಿಪ್‌ ವ್ಯವಹಾರಗಳಿಂದ ಲಾಭಾಂಶ ಕಂಡು ಬರುವುದು. ನಿಮ್ಮಿಂದ ಜನರು ಸಹಾಯವನ್ನು ಬಯಸುವರು. ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು ಎಂಬಂತೆ ನೀವು ದುಡಿದ ಹಣದಲ್ಲಿ ಸ್ವಲ್ಪ ದಾನ ಮಾಡಿ.

Today astrology in kannada today horoscope in kannada

ಸಕ್ಕರೆ ಇದ್ದಲ್ಲಿ ಇರುವೆ ಮುತ್ತುವುದು ಸ್ವಾಭಾವಿಕ. ಅಂತೆಯೇ ಪರೋಪಕಾರಿಗಳಾದ ನಿಮ್ಮ ಬಳಿ ಜನ ಸುತ್ತುವರಿಯುವರು. ನಿಮ್ಮ ನಾಯಕತ್ವಕ್ಕೆ ಹೆಚ್ಚಿನ ಬಲ ಬರುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಬಗ್ಗೆ ಚಿಂತಿಸುವಿರಿ.

Today astrology in kannada today horoscope in kannada

ಮಾತಿನ ಚಾಲಾಕಿತನ ಎಲ್ಲಾ ಕಡೆ ನಡೆಯುವುದಿಲ್ಲ ಎಂಬ ಸತ್ಯ ನಿಮಗೆ ಮನವರಿಕೆ ಆಗಲಿದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ. ಹಾಗಾಗಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುವುದು ಒಳ್ಳೆಯದು.

Today astrology in kannada today horoscope in kannada

ಹೊಸ ಸ್ನೇಹಿತರ ವಲಯವೊಂದು ನಿಮ್ಮನ್ನು ಭೇಟಿ ಮಾಡುವರು ಮತ್ತು ನೀವು ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ಬೆಂಬಲ ಸೂಚಿಸುವರು. ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ವಹಿಸಿಕೊಳ್ಳಲು ಮನವಿ ಮಾಡುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement