ಇಂದಿನ ಭವಿಷ್ಯ ಫೆಬ್ರವರಿ 26, 2020

Today astrology in kannada today horoscope in kannada

ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ.

Today astrology in kannada today horoscope in kannada

ನಿನ್ನೆ ಬಿದ್ದ ಕೆಟ್ಟ ಕನಸುಗಳಿಂದಾಗಿ ನಿಮ್ಮಲ್ಲಿ ಲವಲವಿಕೆ ಕಂಡು ಬರುವುದಿಲ್ಲ. ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ.

Today astrology in kannada today horoscope in kannada

ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

Today astrology in kannada today horoscope in kannada

ಕಾಡಿನ ಸಿಂಹಕ್ಕೆ ಹಸಿವಿದ್ದರೂ ಅದು ಹುಲ್ಲು ತಿನ್ನುವುದಿಲ್ಲ. ಅಂತೆಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷ ಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ನಡೆನುಡಿಯಲ್ಲಿ ಸೌಮ್ಯತೆ ಇರಲಿ.

Today astrology in kannada today horoscope in kannada

ಇದುವರೆಗೂ ನಿಮ್ಮನ್ನು ವಿರೋಧಿಸುತ್ತಿದ್ದ ಜನರೇ ನಿಮ್ಮ ಗೆಳೆತನವನ್ನು ಬಯಸಿ ನಿಮ್ಮ ಬಳಿಬರುವರು. ಅವರು ನಿಜವಾದ ಕಾಳಜಿಯನ್ನು ತೋರಿದಲ್ಲಿ ಮಾತ್ರ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು.

Today astrology in kannada today horoscope in kannada

ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ. ಗುರು ಹಿರಿಯರ ಸಲಹೆ ಪಡೆಯಿರಿ.

Today astrology in kannada today horoscope in kannada

ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಶೇಕಡ 10ರಷ್ಟು ದಾನ ಮಾಡಿ.

Today astrology in kannada today horoscope in kannada

ಮನಸ್ಸಿನ ತಲ್ಲಣಗಳಿಂದ ಮುಕ್ತಿ ಹೊಂದಲು ಕುಲದೇವರ ಪ್ರಾರ್ಥನೆ ಮಾಡಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಶ್ರಮವಹಿಸಿ ಮಾಡುವ ಕೆಲಸಗಳಿಗೆ ವಿಘ್ನ ಬರುವ ಸಾಧ್ಯತೆ ಇದೆ. ಗಣಪತಿ ಪ್ರಾರ್ಥನೆ ಮಾಡಿ.

Today astrology in kannada today horoscope in kannada

ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ನಿಮ್ಮ ವಿಚಾರಧಾರೆಗಳನ್ನು ಇತರರು ಒಪ್ಪಿಕೊಳ್ಳುವರು. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ವಿರಸ ತೋರುವ ಸಾಧ್ಯತೆ ಇರುವುದು. ಶಿವಪಂಚಾಕ್ಷ ರಿ ಮಂತ್ರ ಜಪಿಸಿ.

Today astrology in kannada today horoscope in kannada

ವೃಥಾ ಕಾರಣಗಳಿಗಾಗಿ ಯಾರನ್ನೂ ಕೂಡಾ ವಿರೋಧಿಸಲು ಮುಂದಾಗದಿರಿ. ಗ್ರಹಸ್ಥಿತಿಗಳು ನಿಮ್ಮ ವಿರುದ್ಧ ತೀರ್ಪನ್ನು ನೀಡುವವು. ಹಾಗಾಗಿ ತಾಳ್ಮೆಯನ್ನು ಕಳೆದುಕೊಳ್ಳದಿರಿ.

Today astrology in kannada today horoscope in kannada

ಒಣ ತರ್ಕದಿಂದ ಸಿದ್ಧಾಂತವನ್ನು ರೂಪಿಸಲು ಆಗುವುದಿಲ್ಲ. ನಿಮ್ಮ ವಾದ ಸರಣಿಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಎದುರಾಳಿಯಿಂದ ಮುಖಭಂಗಕ್ಕೆ ಕಾರಣವಾಗುವುದು.

Today astrology in kannada today horoscope in kannada

ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement