ಇಂದಿನ ಭವಿಷ್ಯ ಫೆಬ್ರವರಿ 23, 2020

Today astrology in kannada today horoscope in kannada

ಸರ್ಕಾರಿ ಕೆಲಸದಲ್ಲಿ ಅನ್ಯರ ಹಸ್ತಕ್ಷೇಪದಿಂದ ತೊಂದರೆ ಎದುರಾಗುವುದು. ಹಾಗಾಗಿ ಯಾರೊಡನೆಯೂ ಗುಟ್ಟು ಬಿಟ್ಟುಕೊಡದಿರಿ. ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯ ಸ್ತೋತ್ರವನ್ನು ಪಠಿಸಿ. ಹಣಕಾಸು ಉತ್ತಮವಾಗಿರುವುದು.

Today astrology in kannada today horoscope in kannada

ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ಬ್ಯಾಂಕಿನಲ್ಲಿ ವ್ಯವಹರಿಸುವಾಗ ಬ್ಯಾಂಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿಯಾಗಿಟ್ಟು ಕೊಳ್ಳಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಹಣ ದೋಚುವವರಿಂದ ಎಚ್ಚರದಿಂದಿರಿ.

Today astrology in kannada today horoscope in kannada

ಹೆಚ್ಚಿನ ವೇಗದ ಅಥವಾ ನಿರ್ಲಕ್ಷ್ಯದ ವಾಹನ ಚಾಲನೆಯು ಅಪಘಾತವನ್ನು ಉಂಟುಮಾಡುತ್ತದೆ. ಪ್ರಯಾಣದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಮತ್ತು ಸಂಗಾತಿಯ ಜತೆ ವಾದವಿವಾದವನ್ನು ಮಾಡಿಕೊಳ್ಳದಿರಿ.

Today astrology in kannada today horoscope in kannada

ಹಳೆಯ ಕಡತಗಳನ್ನು ಸೂಕ್ಷ ಮವಾಗಿಯೇ ಪರಿಶೀಲಿಸಿ ವಿಲೇವಾರಿ ಮಾಡಿ. ಸ್ನೇಹಿತರ ಇಲ್ಲವೆ ಬಂಧುಗಳ ಸಹಕಾರವನ್ನು ಪಡೆಯಿರಿ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲದ ಕಾರಣ ಹಣವನ್ನು ಮಿತವಾಗಿ ಬಳಸಿ.

Today astrology in kannada today horoscope in kannada

ಪ್ರತಿದಿನದಂತೆ ಈ ದಿನವೂ ಎಲ್ಲಾ ಸರಿಯಾಗಿದೆ ಎಂದುಕೊಳ್ಳತ್ತಿರುವಾಗಲೇ ಮನೆಯ ಕೆಲಸಗಾರರು ಇಲ್ಲವೆ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ದಿಢೀರನೆ ರಜಾ ಹಾಕುವುದರಿಂದ ಎಲ್ಲಾ ಕೆಲಸವೂ ಒಟ್ಟಿಗೆ ಮೈಮೇಲೆ ಬಂದಂತೆ ಆಗುವುದು.

Today astrology in kannada today horoscope in kannada

ನಿಮ್ಮ ಕಾರ್ಯಕ್ರಮಗಳ ಸಫಲತೆಗೆ ಅನಿರೀಕ್ಷಿತ ವಲಯದಿಂದ ಭಾರೀ ಸಹಾಯ ದೊರೆಯುವುದು. ಇದರಿಂದ ಮನಸ್ಸಿಗೆ ಆನಂದ ಉಂಟಾಗುವುದು. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಗೌರವ ಆದರಗಳು ದೊರೆಯುವುದು.

Today astrology in kannada today horoscope in kannada

ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಗುರುರಾಯರನ್ನು ಸ್ಮರಿಸಿ.

Today astrology in kannada today horoscope in kannada

ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಗಳ ದರ್ಶನಕ್ಕೆ ಜಾತಕಪಕ್ಷಿಯಂತೆ ಕಾಯುವಿರಿ. ಆದರೆ ಗ್ರಹಸ್ಥಿತಿಯು ಕೂಡಾ ನಿರಾಸೆಯನ್ನುಂಟು ಮಾಡುವುದು. ಹಾಗಾಗಿ ಪ್ರಮುಖರ ಭೇಟಿಯು ರದ್ದಾಗಲಿದೆ.

Today astrology in kannada today horoscope in kannada

ಕಾಡಿನಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ನಿಮ್ಮ ಪ್ರಯತ್ನಕ್ಕೆ ಭಗವಂತನು ಒಲಿದು ಬರುವನು. ಮನೆ ಬಾಗಿಲಿಗೆ ನಿಮ್ಮ ಕಾರ್ಯಗಳ ಸಫಲತೆಯ ಬಗ್ಗೆ ವಾರ್ತೆ ಬರುವುದು.

Today astrology in kannada today horoscope in kannada

ಕಟ್ಟಡ ಮೇಲುಸ್ತುವಾರಿಕೆ ಮಾಡುವವರು ಅಥವಾ ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ದಿನ. ಬಹು ಪ್ರಮುಖವಾದ ಮತ್ತು ಬೃಹತ್ತಾದ ಕಾರ್ಯ ನಿರ್ವಹಿಸಲು ನಿಮಗೆ ಕರೆ ಬರುವ ಸಾಧ್ಯತೆ ಇರುತ್ತದೆ.

Today astrology in kannada today horoscope in kannada

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

Today astrology in kannada today horoscope in kannada

ಕೇವಲ ಹಗಲುಗನಸು ಕಾಣುವುದನ್ನು ಬಿಡಿ. ನಿಮಗೆ ಮಾಡಲು ಸಾಧ್ಯವಾದುದನ್ನೆ ಆಯ್ಕೆ ಮಾಡಿಕೊಂಡು ಕೆಲಸ ಪೂರೈಸಿ. ಗೆಳೆಯರ ಒತ್ತಾಯದ ಮೇರೆಗೆ ಬಹುಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement