ಮಂಗಳೂರು, ಫೆಬ್ರವರಿ 17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 16 ರ ಭಾನುವಾರದಂದು ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು 58.95 ಲಕ್ಷ ರೂ. ಸಮೇತ ಬಂಧಿಸಿದ್ದಾರೆ.
ಮೊದಲ ಘಟನೆಯಲ್ಲಿ ಕೇರಳದ ಮಲಪ್ಪುರಂ ಮೂಲದ ಮುಹಮ್ಮದ್ ಸ್ವಾಲಿಹ್ ಚಪ್ಪತೋಡಿ (22) ಅವರು ಸ್ಪೈಸ್‌ಜೆಟ್ ವಿಮಾನ ಎಸ್‌ಜಿ 060 ಮೂಲಕ ದುಬೈನಿಂದ ಆಗಮಿಸಿದರು. ಅವರು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕ್ಯಾಪ್ಸುಲ್ಗಳಲ್ಲಿ ಮರೆಮಾಡಿದ್ದರು ಮತ್ತು ಅದನ್ನು ತಮ್ಮ ಗುದನಾಳದೊಳಗೆ ಅಡಗಿಸಿಕೊಂಡಿದ್ದ. ಈ ಘಟನೆಯಲ್ಲಿ 24 ಕ್ಯಾರೆಟ್ ಶುದ್ಧತೆ ಮತ್ತು 32,35,820 ರೂ.ಗಳ ಒಟ್ಟು 797 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ರೀತಿಯ ಮೋಡಸ್ ಒಪೆರಾಂಡಿಯ ಮತ್ತೊಂದು ಪ್ರಕರಣದಲ್ಲಿ, ಕಸ್ಟಮ್ಸ್ ಅಧಿಕಾರಿ 26.59 ಲಕ್ಷ ಮೌಲ್ಯದ 655 ಗ್ರಾಂ ಚಿನ್ನವನ್ನು ದುಬೈನಿಂದ ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 384 ಮೂಲಕ ಆಗಮಿಸಿದ ಮೊಹಮ್ಮದ್ ನಿಷಾದ್ ಚೆರುವನಸ್ಸೆರಿ (25) ಅವರಿಂದ ವಶಪಡಿಸಿಕೊಂಡಿದ್ದಾರೆ.
ಸೂಪರಿಂಟೆಂಡೆಂಟ್‌ಗಳಾದ ಶ್ರೀಲಕ್ಷ್ಮಿ, ಗೋಪಿನಾಥ್, ಸವಿತಾ ಕೋಟಿಯನ್, ರಾಮವತಾರ್ ಮೀನಾ ಮತ್ತು ಇನ್ಸ್‌ಪೆಕ್ಟರ್ ಸಮಲಾ ಮೋಹನ್ ರೆಡ್ಡಿ ಅವರನ್ನೊಳಗೊಂಡ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರು ಅಡಗಿಸಿಟ್ಟಿದ್ದ ಚಿನ್ನವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಬ್ಬರು ಆರೋಪಿಗಳನ್ನು ಮಂಗಳೂರಿನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Mangaluru: Customs officials seize gold worth Rs 58.95 lac in two separate incidents
Tags:
ಮಂಗಳೂರು ಜಿಲ್ಲಾ ಸುದ್ದಿಗಳು